

ಕೊಕ್ಕಡ: ಶ್ರೀರಾಮ ಸೇವಾ ಮಂದಿರ ಕೊಕ್ಕಡದಲ್ಲಿ ಗ್ರಾಮ ಶಕ್ತಿ ಕೇಂದ್ರ ಕಾರ್ಯಕರ್ತರ ಅಭ್ಯಾಸ ವರ್ಗವು ಶಕ್ತಿ ಕೇಂದ್ರ ಪ್ರಮುಖ ಪ್ರಶಾಂತ್ ಪೂವಾಜೆ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ದೀಪಪ್ರಜ್ವಲನೆಯ ಮೂಲ ಬಿಜೆಪಿ ಗ್ರಾಮ ಸಮಿತಿ ಮಾಜಿ ಕಾರ್ಯದರ್ಶಿ ಸುಂದರ ಭಂಡಾರಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಮಾನ್ಯ ಹರೀಶ್ ಪೂಂಜಾರವರು ಉದ್ಘಾಟನಾ ಭಾಷಣ ಮಾಡಿ ಮಾತನಾಡಿ “ಜನಸಂಘ ಕಾಲಘಟ್ಟದಿಂದ ಇಂದಿನವರೆಗೆ ಅನೇಕ ನಿಸ್ವಾರ್ಥ ಹಿರಿಯ ಕಾರ್ಯಕರ್ತರು ಕೊಕ್ಕಡದಲ್ಲೂ ಪಕ್ಷವನ್ನು ಬೆಳೆಸಿದ್ದಾರೆ. ಯುವ ಕಾರ್ಯಕರ್ತರು ಪಕ್ಷದೊಂದಿಗೆ ‘ನಾನು ಏನು? ಯಾಕೆ ಕೆಲಸ ಮಾಡಬೇಕು?’ ಎಂಬ ಅರ್ಥೈಸಿಕೆಯನ್ನು ಪಡೆಯಲು ಅಭ್ಯಾಸ ವರ್ಗವನ್ನು ಉಪಯೋಗಿಸಿಕೊಳ್ಳಬೇಕು,” ಎಂದು ಹೇಳಿದರು.
ಅಭ್ಯಾಸ ವರ್ಗದ ಪ್ರಥಮ ಅವಧಿಯನ್ನು ವಕೀಲ ಯತೀಶ್ ಪಾನೇಕ್ಕರ್ ಬೋಧಿಸಿದರು. ಅಧ್ಯಕ್ಷತೆಯನ್ನು ಕಾರ್ಯಕರ್ತೆ ಲಕ್ಷ್ಮಿ ಅಡೈ ವಹಿಸಿದ್ದರು. ಎರಡನೇ ಅವಧಿಗೆ ರಾಮಣ್ಣ ಗೌಡ ಕೇಚೋಡಿ ಅಧ್ಯಕ್ಷತೆ ವಹಿಸಿ ಸೀತಾರಾಮ್ ಬೆಳಾಲು ಬೋಧನೆ ನಡೆಸಿದರು. ಮೂರನೇ ಅವಧಿಗೆ ಲೋಕಯ್ಯ ಗೌಡ ಕೆಂಪಮುದೆಲ್ ಅಧ್ಯಕ್ಷತೆ ವಹಿಸಿ ಸುಧಾಕರ್ ಲಾಯಿಲ ಮಾರ್ಗದರ್ಶನ ನೀಡಿದರು.
ಸಮಾರೋಪ ವೇದಿಕೆಯಲ್ಲಿ ತಾಲೂಕು ಅಭ್ಯಾಸ ವರ್ಗ ಸಂಚಾಲಕ ಕೊರಗಪ್ಪ ಗೌಡ ಚಾರ್ಮಾಡಿ, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ, ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಗಣೇಶ್ ಹೊಸ್ತೋಟ ಉಪಸ್ಥಿತರಿದ್ದರು. ಹಿರಿಯ ಮುಖಂಡ ಕುಶಾಲಪ್ಪ ಗೌಡ ಪುವಾಜೆ ಸಮಾರೋಪ ಭಾಷಣ ಮಾಡಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಕೊಯಿಲ, ಕೊಕ್ಕಡ ಬೂತ್ ಅಧ್ಯಕ್ಷ-ಕಾರ್ಯದರ್ಶಿಗಳು ಕಿರಣ್ ಬಳ್ತಿಮರ್, ರವಿಚಂದ್ರ ಪುಡಿಕೇತ್ತುರ್, ಶಶಿಕುಮಾರ್ ತಿಪ್ಪಮಾಜಲ್, ಶ್ರೀಧರ್ ಬಲಕ್ಕ, ಲಿಂಗಪ್ಪ ಕಡಿರ, ಭಾಸ್ಕರ್ ಶೆಟ್ಟಿಗಾರ್, ಕಿಶೋರ್ ಪೋಯ್ಯೋಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .
ಕೊಕ್ಕಡ ಪಂಚಾಯತಿ ಉಪಾಧ್ಯಕ್ಷರು, ಸದಸ್ಯರು, ಸಿ.ಎ. ಬ್ಯಾಂಕ್ ನಿರ್ದೇಶಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಬಿಜೆಪಿ ಗೀತೆಯನ್ನು ಪ್ರಮೀಳಾ.ಜಿ. ನಿರ್ವಹಿಸಿದರು.
ಪವಿತ್ರ ಕೆ. ಸ್ವಾಗತಿಸಿದರು. ಯೋಗೀಶ್ ಆಳಂಬಿಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕರ್ತರು ಸಕ್ರಿಯ ಸಹಕಾರ ನೀಡಿದರು.






