ನೆಲ್ಯಾಡಿ: ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ. ಶಬರೀಶ ಕಲಾಮಂದಿರದಲ್ಲಿ ಓಣಂ ಆಚರಣೆ

ಶೇರ್ ಮಾಡಿ
onam nelyadi

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ,ನೆಲ್ಯಾಡಿ ಕರಯೋಗಂ ವತಿಯಿಂದ ಏರ್ಪಡಿಸಲಾಗಿದ್ದ ಓಣಂ ಆಚರಣೆಯು ದಿನಾಂಕ 07 -09 -2025 ನೇ ಭಾನುವಾರದಂದು ನೆಲ್ಯಾಡಿ ಅಯ್ಯಪ್ಪ ದೇವಸ್ಥಾನದ ಶಬರೀಶ ಕಲಾಮಂದಿರದಲ್ಲಿ ಶ್ರೀ ಶಿವದಾಸನ್ ಪಿಳ್ಳೈ , ಕರಯೋಗಂ ಅಧ್ಯಕ್ಷರು ಅವರ ನೇತೃತ್ವದಲ್ಲಿ ನಡೆಯಿತು. ನಾಯರ್ ಸರ್ವಿಸ್ ಸೊಸೈಟಿಯ ಉಪಾಧ್ಯಕ್ಷರು, ಕಾರ್ಯದರ್ಶಿ , ಸಮಿತಿ ಸದಸ್ಯರು , ಮಹಿಳಾ ವಿಭಾಗಂ ಅಧ್ಯಕ್ಷರು , ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಒಟ್ಟು ಸೇರಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು .

onam nelyadi

ನಾಯರ್ ಸರ್ವಿಸ್ ಸೊಸೈಟಿ ನೆಲ್ಯಾಡಿ ಕರಯೋಗಂ ಅಧ್ಯಕ್ಷರು ಶಿವದಾಸನ್ ಪಿಳ್ಳೈ ,ಉಪಾಧ್ಯಕ್ಷರು ಸುಕುಮಾರನ್ ನಾಯರ್, ಕಾರ್ಯದರ್ಶಿ ಉದಯ್ ಕುಮಾರ್, ಟ್ರಶರರ್ ಉಪೇಂದ್ರ ಕುಮಾರ್, ಮಹಿಳಾ ವಿಭಾಗಂ ಅಧ್ಯಕ್ಷೆ ಶ್ರೀಮತಿ ಶ್ರೀಜಾ ವಿನೋದ್ , ಕಾರ್ಯದರ್ಶಿ ಶ್ರೀಮತಿ ಶ್ರೀಜಾ ಸಂದೀಪ್ ಹಾಗೂ ನಾಯರ್ ಸರ್ವಿಸ್ ಸೊಸೈಟಿಯ ನೆಟ್ಟಣ , ಉಜಿರೆ ,ಬೆಳ್ತಂಗಡಿ , ಇಚಿಲಂಪಾಡಿ, ನೆಲ್ಯಾಡಿ ಕೊಕ್ಕಡ ಭಾಗದ ಎಲ್ಲಾ ಸದ್ಯಸರು ಉಪಸ್ಥಿತರಿದ್ದರು . ಓಣಂ ಪ್ರಯುಕ್ತ ಪೂಕಳಂ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

ಪ್ರಥಮ ಶ್ರೀಜಾ ವಿನೋದ್ ಮತ್ತು ತಂಡ ಇಚಿಲಂಪಾಡಿ , ದ್ವಿತೀಯ ಶ್ರೀಜಾ ಸಂದೀಪ್ ಮತ್ತು ತಂಡ ಉಜಿರೆ , ತೃತೀಯ ಬಹುಮಾನವನ್ನು ಗೋಪಿಕಾ ಮತ್ತು ತಂಡ ಉಜಿರೆ ಪಡೆದುಕೊಂಡಿದ್ದಾರೆ. 2024 -25 ನೇ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು .
10ನೇ ತರಗತಿಯಲ್ಲಿ ಪ್ರಥಮ ಸ್ಥಾನವನ್ನು ಶ್ರೇಯಾ ಉಜಿರೆ, ದ್ವಿತೀಯ ಸ್ಥಾನವನ್ನು ನಿಶಾಂತ್ ಎಸ್ ನೆಟ್ಟಣ ಹಾಗೂ ತೃತೀಯ ಸ್ಥಾನವನ್ನು ಪ್ರೀತಮ್ ನೆಟ್ಟಣ ಇವರು ಪಡೆದುಕೊಂಡರೆ, ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕವನ್ನು ಪಡೆದು ಪ್ರಥಮ ಸ್ಥಾನವನ್ನು ಪ್ರಾಪ್ತಿ ಬೆಳ್ತಂಗಡಿ ಹಾಗೂ ದ್ವಿತೀಯ ಸ್ಥಾನವನ್ನು ಅಕ್ಷಯ್ ಕುಮಾರ್ ಇಚಿಲಂಪಾಡಿ ಇವರು ಪಡೆದುಕೊಂಡಿದ್ದಾರೆ.

ಪಂಚಮಿ ಹಾಗೂ ಪೌರ್ಣಮಿ ಅವರಿಂದ ಪ್ರಾರ್ಥನೆ ನಂತರ, ಆಚಾರ್ಯ ಸ್ಮರಣೆ ಶ್ರೀಜಾ ಸಂದೀಪ್ ,ಶ್ರೀಜಾ ವಿನೋದ್ , ಜಿಷಾ ದಿಲೀಪ್  ನೆರವೇರಿಸಿದರು.
ರಾಜೇಶ್ ಕೊಕ್ಕಡ ಸ್ವಾಗತ ಕೋರಿದರು. ಕರಯೋಗಂ ಮಾಜಿ ಅಧ್ಯಕ್ಷರಾದ ಶ್ರೀ ರಘುನಾಥನ್ ನಾಯರ್ ಹಾಗೂ ಇತರೆ ಸದಸ್ಯರು ಎಲ್ಲರಿಗೂ ಶುಭಕೋರಿದರು .
ತದನಂತರ ಪುಟಾಣಿಗಳಿಂದ ಹಾಗೂ ಸರ್ವ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಮಧ್ಯಾಹ್ನ ಭೋಜನದ ಬಳಿಕ ಅನೇಕ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಯಿತು.

ರಾಜೇಶ್ ಕುಮಾರ್ ಮತ್ತು ಗಣೇಶ್ ಕುಮಾರ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು ಹಾಗೂ ಉದಯ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು.
ಬೆಳಗಿನ ಉಪಹಾರ ಮತ್ತು ಮದ್ಯಾಹ್ನದ ಓಣಂ ಸದ್ಯ ವ್ಯವಸ್ಥೆ ಮಾಡಲಾಗಿತ್ತು .

  •  

Leave a Reply

error: Content is protected !!