

ನೆಲ್ಯಾಡಿ: ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ವತಿಯಿಂದ ಮಂಗಳೂರು ಸರಕಾರಿ ಲೇಡಿ ಘೋಷನ ಆಸ್ಪತ್ರೆ ಹಾಗೂ ನೆಲ್ಯಾಡಿ ಸರಕಾರಿ ಆಸ್ಪತ್ರೆ ಸಹಯೋಗದೊಂದಿಗೆ ಕಾಮಧೇನು ಆರೋಗ್ಯ ಭಾಗ್ಯ ಯೋಜನೆಯಡಿ ರಕ್ತದಾನ ಶಿಬಿರ ಸೆ.13ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಶಿರಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಕ್ತದಾನವು ಮಹಾದಾನ, ರಕ್ತದಾನದಿಂದ ಸಿಗುವಂತ ಪುಣ್ಯ ಯಾವುದರಿಂದ ಸಿಗಲು ಸಾಧ್ಯವಿಲ್ಲ. ರಕ್ತ ನೀಡುವುದರಿಂದ ಕೆಂಪು ರಕ್ತ ಕಣಗಳು ಹೆಚ್ಚಾಗುತ್ತದೆ, ಕೊಬ್ಬಿನ ಅಂಶಗಳು ನಮ್ಮ ದೇಹದಲ್ಲಿ ಕಡಿಮೆಯಾಗುತ್ತದೆ ಅದರೊಟ್ಟಿಗೆ ನಮ್ಮಿಂದಾಗಿ ಒಬ್ಬರ ಜೀವ ಉಳಿಸಿದಂತೆ ಆಗುತ್ತದೆ ಎಂದರು.
ಆರೋಗ್ಯ ಭಾಗ್ಯ ಕಾರ್ಯಕ್ರಮದ ಬಿತ್ತಿ ಪತ್ರವನ್ನು ಉಪವಲಯರಣ್ಯಾಧಿಕಾರಿ ರವಿಚಂದ್ರ ಪಡುಬೆಟ್ಟು ಅನಾವರಣಗೊಳಿಸಿ ಮಾತಾಡಿದ ಅವರು ನಾನು ಇದುವರೆಗೂ 16 ಬಾರಿ ರಕ್ತದಾನವನ್ನು ಮಾಡಿದ್ದೇನೆ. ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆಗಳು ನಮಗೆ ಬರುವುದಿಲ್ಲ. ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉಷಾ ಅಂಚನ್ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು.
ವೇದಿಕೆಯಲ್ಲಿ ವೇದಿಕೆಯಲ್ಲಿ ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಸಲಾಂ ಬಿಲಾಲ್, ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಂಚಾಲಕ ಪ್ರವೀಣ್‌ಕುಮಾರ್, ಜನಾರ್ದನ ಬಾಣಜಾಲು, ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಸತೀಶ್ ಇಚ್ಲಂಪಾಡಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೈತನ್ಯ .ಸುಧೀರ್‌ಕುಮಾರ್ ನಿರೂಪಿಸಿದರು.






