ಅರಸಿನಮಕ್ಕಿ ಕಾಪಿನಡ್ಕದಲ್ಲಿ ಬೈಕ್-ಆಟೋರಿಕ್ಷಾ ಡಿಕ್ಕಿ – ಬೈಕ್ ಸವಾರ ಗಂಭೀರ ಗಾಯ

ಶೇರ್ ಮಾಡಿ

ಕೊಕ್ಕಡ: ಅರಸಿನಮಕ್ಕಿ ಗ್ರಾಮದ ಕಾಪಿನಡ್ಕದ ಬಳಿ ಭಾನುವಾರ ಸಂಜೆ ಬೈಕ್ ಹಾಗೂ ಆಟೋರಿಕ್ಷಾ ನಡುವೆ ಭೀಕರ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.

ಪಟ್ರಮೆ ಗ್ರಾಮದ ಅನಾರು ನಿವಾಸಿ ಕಾರ್ತಿಕ್ ಎಂಜಿರದಿಂದ ಅರಸಿನಮಕ್ಕಿ ಕಡೆಗೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದರು. ಇದೇ ವೇಳೆ ಅರಸಿನಮಕ್ಕಿಯಿಂದ ಎಂಜಿರ ಕಡೆಗೆ ತೆರಳುತ್ತಿದ್ದ ಆಟೋರಿಕ್ಷಾವನ್ನು ರೋಶಾಂತ್ ಚಲಾಯಿಸಿಕೊಂಡು ಬರುತ್ತಿದ್ದಾಗ ಕಾಪಿನಡ್ಕ ತಲುಪುತ್ತಿದ್ದಂತೆ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದವು.

ಅವಘಡದಲ್ಲಿ ಬೈಕ್ ಸವಾರ ಕಾರ್ತಿಕ್ ಗಂಭೀರ ಗಾಯಗೊಂಡಿದ್ದು, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಸಿನಮಕ್ಕಿ ರಿಕ್ಷಾ ಚಾಲಕರು ಗಾಯಾಳುವನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು. ಅಪಘಾತದಲ್ಲಿ ಆಟೋರಿಕ್ಷಾ ಮತ್ತು ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.

  •  

Leave a Reply

error: Content is protected !!