ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸಾದ್ ಕೌಶಲ್ ಶೆಟ್ಟಿ, ಉಪಾಧ್ಯಕ್ಷರಾಗಿ ರಾಯ್ ಅಬ್ರಹಾಂ ಅವಿರೋಧ ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಮುಂದಿನ 5ವರ್ಷದ ಅವಧಿಗೆ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ರಾಯ್ ಅಬ್ರಹಾಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೆ.23ರಂದು ಬೆಳಿಗ್ಗೆ ನೆಲ್ಯಾಡಿಯಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನೆರವೇರಿತು.

ಸಭೆಯಲ್ಲಿ ನಿರ್ದೇಶಕರಾದ ಕೇಶವ ಭಂಡಾರಿ ಕೈಪ ಕೋಡಿಂಬಾಡಿ, ಜಾರ್ಜ್ ಕುಟ್ಟಿ ಸಿ. ನಿಡ್ಯಡ್ಕ ಇಚ್ಲಂಪಾಡಿ, ರಮೇಶ್ ಕಲ್ಪುರೆ 102 ನೆಕ್ಕಿಲಾಡಿ ಮರ್ದಾಳ, ವ್ಯಾಸ ಎನ್.ವಿ. ನೆಕ್ಕರ್ಲ ಕೌಕ್ರಾಡಿ, ಶ್ರೀರಾಮ ಪಕ್ಕಳ ಕರ್ನೂರುಗುತ್ತು ನೆಟ್ಟಣಿಗೆ ಮುಡ್ನೂರು, ಸತ್ಯಾನಂದ ಬಿ. ಬೊಳ್ಳಾಜೆ ನೂಜಿಬಾಳ್ತಿಲ, ಗಿರೀಶ್ ಸಾಲಿಯಾನ್ ಬಿ.ಬದನೆ ಇಚ್ಲಂಪಾಡಿ, ಜಯರಾಮ ಬಿ. ಬಾಣಜಾಲು ಕೌಕ್ರಾಡಿ, ಅರುಣಾಕ್ಷಿ ಅಕ್ಷಯ ನಿಲಯ ಪುಚ್ಚೇರಿ ನೆಲ್ಯಾಡಿ, ಗ್ರೇಸಿ ನೈನಾನ್ ಸ್ನೇಹ ಸದನ ನೆಲ್ಯಾಡಿ, ಸುಭಾಸ್ ನಾಯಕ್ ನೆಕ್ರಾಜೆ ಕೋಡಿಂಬಾಡಿ ಉಪಸ್ಥಿತರಿದ್ದರು.

ಆಯ್ಕೆ ಪ್ರಕ್ರಿಯೆಯನ್ನು ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಕಚೇರಿಯ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಕೆ. ನೆರವೇರಿಸಿದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಪ್ರಭಾ ಕೆ. ಸಹಕರಿಸಿದರು.

2010ರಿಂದ ಸತತವಾಗಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ಕೌಶಲ್ ಶೆಟ್ಟಿ ಅವರು ಇದೀಗ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಪುಡಾದ ಮಾಜಿ ಅಧ್ಯಕ್ಷರಾಗಿದ್ದ ಇವರು ಪ್ರಸ್ತುತ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿದ್ದು, ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಯ್ ಅಬ್ರಹಾಂ ಅವರು 2010ರಿಂದ ಈ ಹುದ್ದೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

  •  

Leave a Reply

error: Content is protected !!