ನೆಲ್ಯಾಡಿ ಬೆಥನಿ ಐಟಿಐ ಯಲ್ಲಿ ಆಯುಧ ಪೂಜೆ ಆಚರಣೆ

ಶೇರ್ ಮಾಡಿ

ನೆಲ್ಯಾಡಿ: ಬೆಥನಿ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ (ಐಟಿಐ), ನೆಲ್ಯಾಡಿಯಲ್ಲಿ ಭಕ್ತಿ ಭಾವಪೂರ್ಣವಾಗಿ ಆಯುಧ ಪೂಜೆಯನ್ನು ಆಚರಿಸಲಾಯಿತು.

ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ ಫಾ.ಡಾ.ವರ್ಗೀಸ್ ಕೈಪನಡ್ಕ, ಒಐಸಿ ಹಾಗೂ ಸಂಸ್ಥೆಯ ಕಾರ್ಯದರ್ಶಿ ಫಾ.ಜೋರ್ಜ್ ಸ್ಯಾಮುವೆಲ್, ಒಐಸಿ ಅತಿಥಿಗಳಾಗಿ ಆಗಮಿಸಿ ಪೂಜಾ ವಿಧಿಗಳಿಗೆ ನೇತೃತ್ವ ವಹಿಸಿ, ಆಶೀರ್ವಚನ ನೀಡಿದರು.

ದಸರಾ ಹಬ್ಬದ ಸಂದರ್ಭದಲ್ಲಿ ಆಚರಿಸುವ ಒಂದು ಹಬ್ಬ. ಆಯುಧ ಪೂಜೆಯು ಶ್ರಮಕ್ಕೆ ಗೌರವ, ಶ್ರಮದ ಪಾವಿತ್ರ್ಯತೆ, ಸಂಪ್ರದಾಯದ ಮೌಲ್ಯ, ಒಗ್ಗಟ್ಟು ಮತ್ತು ಆಧ್ಯಾತ್ಮಿಕತೆಯನ್ನು ನೆನಪಿಸುವ ಹಬ್ಬ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಲ್ಯಾಬ್‌ಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಿ, ಉಪಕರಣಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಕ್ರಿಯವಾಗಿ ಪಾಲ್ಗೊಂಡರು. ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಸಹ ಭಕ್ತಿಭಾವದಿಂದ ಭಾಗವಹಿಸಿದರು.

ಆಯುಧ ಪೂಜೆ ಕೇವಲ ಹಬ್ಬವಲ್ಲ, ಇದು ಶ್ರಮದ ಮೌಲ್ಯವನ್ನು ನೆನಪಿಸುವ ಸಂಪ್ರದಾಯ. ವಿದ್ಯಾರ್ಥಿಗಳಲ್ಲಿ ಭಕ್ತಿಭಾವ ಮತ್ತು ಕೌಶಲ್ಯದ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ ಫಾ.ಡಾ.ವರ್ಗೀಸ್ ಕೈಪನಡ್ಕ ಹೇಳಿದರು.

ಪ್ರಾಂಶುಪಾಲರಾದ ಸಜಿ.ಕೆ.ತೋಮಸ್ ಸ್ವಾಗತಿಸಿದರು, ತರಬೇತಿ ಅಧಿಕಾರಿ ಜೋನ್.ಪಿ.ಎಸ್. ವಂದಿಸಿದರು.

  •  

Leave a Reply

error: Content is protected !!