

ಅರಸಿನಮಕ್ಕಿ: ಸುಮಾರು 57 ವರ್ಷಗಳ ಶೈಕ್ಷಣಿಕ ಪಯಣ ಪೂರ್ಣಗೊಳಿಸಿರುವ ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘವನ್ನು ಅ.4ರಂದು ರಚಿಸಲಾಯಿತು. ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಮತ್ತು ಹಳೆ ವಿದ್ಯಾರ್ಥಿಗಳ ಸಕ್ರೀಯ ಸಹಭಾಗಿತ್ವಕ್ಕಾಗಿ ಸಂಘದ ಹೊಸ ಹುದ್ದೆಗಳನ್ನು ಆಯ್ಕೆ ಮಾಡಲಾಯಿತು.
ಉದ್ಯಮಿ ವಾಮನ ತಾಮ್ಹನ್ಕರ್ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ಉದ್ಯಮಿ ಪ್ರಕಾಶ್ ಪಿಲಿಕ್ಕಬೆ, ಶಿವಾನಂದ ಮಯ್ಯ, ಸಂದೀಪ್ ಅಮ್ಮುಡಂಗೆ, ಹರೀಶ್ ಯು., ರಾಜು ಕೆ. ಸಾಲಿಯಾನ್ ಹಾಗೂ ವೃಷಾಂಕ್ ಖಾಡಿಲ್ಕರ್ ಆಯ್ಕೆಯಾದರು.
ಕಾರ್ಯದರ್ಶಿಗಳಾಗಿ ಮುಖ್ಯಶಿಕ್ಷಕಿ ಮಂಜುಳಾ ಎಂ. ಮತ್ತು ಜೊತೆ ಕಾರ್ಯದರ್ಶಿಗಳಾಗಿ ಚೇತನಾ ಕುಮಾರಿ, ಶರತ್ ತುಳುಪುಳೆ ನೇಮಕಗೊಂಡರು. ಸದಸ್ಯರಾಗಿ ಶ್ರೀರಂಗ ದಾಮಲೆ, ಸುಧೀರ್ ಕುಮಾರ್ ಎಂ.ಎಸ್., ಕೇಶವ ರಾವ್ ನೆಕ್ಕಿಲು, ಜಯರಾಮ ನೆಲ್ಲಿತ್ತಾಯ ಶಿಶಿಲ, ಶಶಾಂಕ್, ಗಣೇಶ್ ಕೆ. ಹೊಸ್ತೋಟ, ಮುರಳೀಧರ ಶೆಟ್ಟಿಗಾರ್, ಭವ್ಯ, ತೇಜಸ್ವಿನಿ, ರೇಷ್ಮಾ ಹಾಗೂ ಯಮುನಾ ಆಯ್ಕೆಗೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಕುಲಾಲ್ ವಹಿಸಿದ್ದರು. ಮುಖ್ಯಶಿಕ್ಷಕಿ ಮಂಜುಳಾ ಎಂ. ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಜ್ಞಾನ ಶಿಕ್ಷಕಿ ಶ್ರೀಚೇತನ ಕಾರ್ಯಕ್ರಮವನ್ನು ನಿರೂಪಿಸಿದರು.






