ನೆಲ್ಯಾಡಿಯ ಉದ್ಯಮಿ ಗೂಡಂಗಡಿ ಲಕ್ಷ್ಮಣ ಗೌಡ ನಿಧನ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿಯ ಹೆಸರಾಂತ ಗೋಕುಲ್ ಸ್ವೀಟ್ಸ್ ಸಂಸ್ಥೆಯ ಸಂಸ್ಥಾಪಕರಾದ ಕೌಕ್ರಾಡಿ ಗ್ರಾಮದ ಕಟ್ಟೆಮಜಲು ನಿವಾಸಿ, ಉದ್ಯಮಿ ಲಕ್ಷ್ಮಣ ಗೌಡ(73) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ(ಅ.15) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸುಮಾರು 15 ದಿನಗಳ ಹಿಂದೆ ಪಾರ್ಶ್ವವಾಯುವಿನ ಪರಿಣಾಮದಿಂದಾಗಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ ಕೊನೆಯುಸಿರೆಳೆದರು.

ಲಕ್ಷ್ಮಣ ಗೌಡರು ಕಳೆದ ಸುಮಾರು ಐವತ್ತು ವರ್ಷಗಳಿಂದ ‘ನೆಲ್ಯಾಡಿ ಗೋಕುಲ್ ಸ್ವೀಟ್ಸ್’ ಎಂಬ ಹೆಸರಿನಲ್ಲಿ ವ್ಯಾಪಾರ ನಡೆಸುತ್ತಾ ಸ್ಥಳೀಯರಿಗೆ ಅಚ್ಚುಮೆಚ್ಚಾದ ವ್ಯಕ್ತಿಯಾಗಿದ್ದರು. ಜನಪ್ರಿಯವಾಗಿ ‘ಗೂಡಂಗಡಿ ಲಕ್ಷ್ಮಣ’ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು.

ಮೃತರಿಗೆ ಎರಡು ಹೆಣ್ಣು ಹಾಗೂ ಒಂದು ಗಂಡು ಮಕ್ಕಳು ಇದ್ದಾರೆ.

  •  

Leave a Reply

error: Content is protected !!