ಅ.23ರಂದು ಶ್ರೀ ಮಹಾಗಣಪತಿ ದಂತ ಚಿಕಿತ್ಸಾಲಯ — ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸ್ಥಳಾಂತರಗೊಂಡು ಶುಭಾರಂಭ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಪ್ರದೇಶದಲ್ಲಿ ಕಳೆದ 22 ವರ್ಷಗಳಿಂದ ಸಾರ್ವಜನಿಕರಿಗೆ ವಿಶ್ವಾಸಾರ್ಹ ಹಾಗೂ ಗುಣಮಟ್ಟದ ದಂತ ಚಿಕಿತ್ಸಾ ಸೇವೆ ನೀಡುತ್ತಿರುವ ಶ್ರೀ ಮಹಾಗಣಪತಿ ದಂತ ಚಿಕಿತ್ಸಾಲಯ ಇದೀಗ ತನ್ನ ಸೇವಾ ಪಯಣದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದೆ.

ಚಿಕಿತ್ಸಾಲಯವು 23ನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸುಸಂದರ್ಭದಲ್ಲಿ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೊಸ ಸ್ಥಳಕ್ಕೆ ಸ್ಥಳಾಂತರಗೊಂಡು ಅ.23ರಂದು (ಗುರುವಾರ) ಬೆಳಗ್ಗೆ 8.30ಕ್ಕೆ ಶುಭಾರಂಭಗೊಳ್ಳಲಿದೆ.

ಹೊಸ ಕ್ಲಿನಿಕ್ ನೆಲ್ಯಾಡಿಯ ಕೆನರಾ ಬ್ಯಾಂಕ್ ಸಮೀಪದ ಶ್ರೀ ಗಣೇಶ್ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಜನತೆಗೆ ಆಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳೊಂದಿಗೆ ದಂತ ಚಿಕಿತ್ಸೆಯನ್ನು ನೀಡಲಿದೆ.

ದಂತ ವೈದ್ಯಾಧಿಕಾರಿಯಾದ ಡಾ. ರಂಜಿತಾ ಎಂ ಅವರು ಪ್ರಕಟಣೆ ನೀಡುತ್ತಾ, “ಈ ಹೊಸ ಕೇಂದ್ರವು ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ನವೀನ ಉಪಕರಣಗಳು, ಆರಾಮದಾಯಕ ವಾತಾವರಣ ಹಾಗೂ ತಜ್ಞ ಸೇವೆಗಳನ್ನು ಒಳಗೊಂಡಿದೆ. ಕಳೆದ ಎರಡು ದಶಕಗಳಿಂದ ಸಾರ್ವಜನಿಕರು ನೀಡಿರುವ ನಂಬಿಕೆ ಮತ್ತು ಪ್ರೋತ್ಸಾಹವೇ ನಮ್ಮ ಮುಂದಿನ ಪಯಣದ ಪ್ರೇರಣೆ” ಎಂದು ತಿಳಿಸಿದ್ದಾರೆ.

ನೆಲ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನತೆಗೆ ಶ್ರದ್ಧಾಪೂರ್ವಕ ಸೇವೆ ನೀಡುತ್ತಿರುವ ಶ್ರೀ ಮಹಾಗಣಪತಿ ದಂತ ಚಿಕಿತ್ಸಾಲಯದ ಈ ಹೊಸ ಆರಂಭವನ್ನು ಸ್ಥಳೀಯರು ಸಂತಸದೊಂದಿಗೆ ಸ್ವಾಗತಿಸುತ್ತಿದ್ದಾರೆ.

  •  

Leave a Reply

error: Content is protected !!