


ನೆಲ್ಯಾಡಿ: ಜೆಸಿಐ ಭಾರತ ವಲಯ 15ರ ವಲಯ ಸಮ್ಮೇಳನ ‘ಕಹಳೆ 2025’ ಅ.18 ಮತ್ತು 19 ರಂದು ಮಂಗಳೂರು ಸುಲ್ತಾನ್ ಬತ್ತೆರಿಯ ಸ್ವಸ್ತಿಕ್ ವಾಟರ್ ಫ್ರಂಟ್ ನಲ್ಲಿ ಅದ್ದೂರಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಸುಮಾರು 42 ವರ್ಷಗಳ ಶ್ರೀಮಂತ ಇತಿಹಾಸವಿರುವ ಜೆಸಿಐ ನೆಲ್ಯಾಡಿ ಘಟಕಕ್ಕೆ, ಕಳೆದ ಒಂದು ವರ್ಷದ ಅವಧಿಯಲ್ಲಿ ಕೈಗೊಂಡ ಸಮಾಜಮುಖಿ ಚಟುವಟಿಕೆಗಳಿಗೆ ಅನೇಕ ಪ್ರಶಸ್ತಿ ಮತ್ತು ಮನ್ನಣೆಗಳು ದೊರಕಿವೆ.
ಜೆಸಿಐ ನೆಲ್ಯಾಡಿ ವತಿಯಿಂದ ಈ ವರ್ಷ ಹಮ್ಮಿಕೊಂಡಿದ್ದ ತರಬೇತಿ ಶಿಬಿರಗಳು, ಬೇಸಿಗೆ ಶಿಬಿರ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಜೆಸಿ ಸಪ್ತಾಹ, ಸಾರ್ವಜನಿಕ ಕ್ರೀಡಾಕೂಟ, ನೇತ್ರಪರೀಕ್ಷಣಾ ಶಿಬಿರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಗೌರವ ಸೂಚಿಸುವ “ಸಲ್ಯೂಟ್ ದಿ ಸೈಲೆಂಟ್ ಸ್ಟಾರ್” ಪುರಸ್ಕಾರ ಕಾರ್ಯಕ್ರಮ ಸೇರಿದಂತೆ ಹಲವಾರು ಚಟುವಟಿಕೆಗಳಿಗೆ ಒಟ್ಟು 20ಕ್ಕೂ ಹೆಚ್ಚು ಪ್ರಶಸ್ತಿ ಮತ್ತು ಮನ್ನಣೆಗಳು ಲಭಿಸಿವೆ.
ಇತ್ತೀಚೆಗಷ್ಟೇ ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ಅಳವಡಿಸಿದ ಸಿಮೆಂಟ್ ಕುರ್ಚಿಗಳ ಶಾಶ್ವತ ಯೋಜನೆಗೆ, ಜೆಸಿಐ ಭಾರತ ವತಿಯಿಂದ ನೀಡಲಾಗುವ “ಅತ್ಯುತ್ತಮ ರಾಷ್ಟ್ರೀಯ ಶಾಶ್ವತ ಪರಿಹಾರ ಯೋಜನೆ” ವಿಭಾಗದಲ್ಲಿ ರನ್ನರ್ ಪ್ರಶಸ್ತಿ ದೊರೆತಿದೆ.
ಅದೇ ಸಂದರ್ಭದಲ್ಲಿ, ಜೆಸಿಐ ನೆಲ್ಯಾಡಿ ಘಟಕದ ಅಧ್ಯಕ್ಷರಾದ ಜೆಸಿ ಡಾ.ಸುಧಾಕರ್ ಶೆಟ್ಟಿ ಅವರಿಗೆ ಜೆಸಿಐ ಇಂಡಿಯಾ ಫೌಂಡೇಶನ್‌ನ ಅತ್ಯುತ್ತಮ ಸದಸ್ಯರ ರನ್ನರ್ ಪ್ರಶಸ್ತಿ ಲಭಿಸಿದೆ.
ಹಾಗೆಯೇ ಈ ವರ್ಷದ ಹೊಸ ಸದಸ್ಯೆಯಾಗಿರುವ ಜೆಸಿ ಪ್ರವೀಣಿ ಶೆಟ್ಟಿ ಅವರು ವಲಯ ಮಟ್ಟದ ಅತ್ಯುತ್ತಮ ಹೊಸ ಮಹಿಳಾ ಜೆಸಿ ಸದಸ್ಯೆ ಪ್ರಶಸ್ತಿಯನ್ನು ಗೆದ್ದು ಘಟಕಕ್ಕೆ ಕೀರ್ತಿಯನ್ನು ತಂದಿದ್ದಾರೆ.
ವಲಯ ಸಮ್ಮೇಳನದಲ್ಲಿ ಜೆಸಿಐ ನೆಲ್ಯಾಡಿ ಅಧ್ಯಕ್ಷರಾದ ಜೆಸಿ ಡಾ. ಸುಧಾಕರ್ ಶೆಟ್ಟಿ, ಜೆಸಿ ಅಬ್ರಹಾಂ ವರ್ಗೀಸ್, ಜೆಸಿ ಸುಚಿತ್ರಾ ಬಂಟ್ರಿಯಲ್, ಜೆಸಿ ಪ್ರವೀಣಿ ಶೆಟ್ಟಿ, ಜೆಸಿ ಪುರಂದರ ಗೌಡ, ಜೆಸಿ ಜಾಹ್ನವಿ, ಜೆಸಿ ಲೀಲಾ ಮೋಹನ್, ಜೆಸಿ ಜಾನ್ ಪಿ.ಎಸ್., ಜೆಸಿ ಸುಪ್ರೀತ ರವಿಚಂದ್ರ, ಜೆಸಿ ದಯಾಕರ್ ರೈ, ಜೆಸಿ ಶಿವಪ್ರಕಾಶ್, ಜೆಸಿ ಲಕ್ಷ್ಮಣ ಟೈಲರ್, ಜೆಸಿ ಅಶೋಕ್ ರೈ ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.






