ನಾಟಿ ವೈದ್ಯೆ ಕಮಲ ಕಳೆಂಜ ನಿಧನ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ದಿ.ಶೀನಪ್ಪ ಗೌಡ ಅವರ ಧರ್ಮಪತ್ನಿ ಹಾಗೂ ಜನಾನುರಾಗಿಯಾದ ನಾಟಿ ವೈದ್ಯೆ ಕಮಲ ಶೀನಪ್ಪ ಗೌಡ(73) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ಜನರ ನೋವು ನಿವಾರಣೆಗೈದು, ನಾಡಿನ ಹಲವಾರು ಜನರ ಪ್ರೀತಿಗೆ ಪಾತ್ರರಾದ ಕಮಲ ಅವರು ನಾಟಿ ವೈದ್ಯೆಯಾಗಿ ಖ್ಯಾತರಾಗಿದ್ದರು. ಸರಳ, ಸೌಮ್ಯ ಸ್ವಭಾವದ ಇವರು ಸಮಾಜಸೇವಾ ಮನೋಭಾವದಿಂದ ಜೀವಿಸಿದರು.

ಮೃತರು ಮೂವರು ಗಂಡು ಹಾಗೂ ಒಬ್ಬ ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

  •  

Leave a Reply

error: Content is protected !!