

ನೆಲ್ಯಾಡಿ: ಉಪ್ಪಿನಂಗಡಿ ವಲಯದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಬಾಲಕ-ಬಾಲಕಿಯರ ಕ್ರೀಡಾಕೂಟವು ಸರಕಾರಿ ಪ್ರೌಢ ಶಾಲೆ ಹಿರೆಬಂಡಾಡಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಈ ಕ್ರೀಡಾಕೂಟದಲ್ಲಿ ನೆಲ್ಯಾಡಿ ಪಿಎಂಶ್ರೀ ಶಾಲೆಯ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ತಮ್ಮ ಅದ್ಭುತ ಕ್ರೀಡಾ ಪ್ರದರ್ಶನದ ಮೂಲಕ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ವೈಯಕ್ತಿಕ ಹಾಗೂ ತಂಡದ ವಿಭಾಗಗಳಲ್ಲಿ ಬಹುಮಾನವನ್ನು ಪಡೆದುಕೊಂಡರು.
ವೈಯಕ್ತಿಕ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ತೃಪ್ತಿ ಪಿ.ಕೆ ಚಕ್ರ ಎಸೆತದಲ್ಲಿ ಪ್ರಥಮ, ಗುಂಡು ಎಸೆತದಲ್ಲಿ ದ್ವಿತೀಯ, ಕೃತಿಕ್ ಚಕ್ರ ಎಸೆತದಲ್ಲಿ ಪ್ರಥಮ, ಗುಂಡು ಎಸೆತದಲ್ಲಿ ದ್ವಿತೀಯ, ಆಯಿಷತ್ ತಸ್ಲೀಮಾ 200 ಮೀಟರ್ ಓಟದಲ್ಲಿ ಪ್ರಥಮ, ನಿಶ್ಮಿತಾ ಉದ್ದ ಜಿಗಿತದಲ್ಲಿ ದ್ವಿತೀಯ, ದೀಕ್ಷಾ ಉದ್ದ ಜಿಗಿತದಲ್ಲಿ ತೃತೀಯ ಹಾಗೂ ಇದೇ ಸಂದರ್ಭದಲ್ಲಿ ಹದಿನಾಲ್ಕು ವರ್ಷ ವಯೋಮಾನದ ಬಾಲಕಿಯರ ತಂಡ ಅತ್ಯುತ್ತಮ ತಂಡಾತ್ಮಕ ಕೌಶಲ್ಯ ಪ್ರದರ್ಶಿಸಿ “ರನ್ನರ್ಸ್ ಅಪ್ ಚಾಂಪಿಯನ್” ಪಟ್ಟವನ್ನು ಪಡೆದುಕೊಂಡರು.
ವಿದ್ಯಾರ್ಥಿಗಳ ಈ ಯಶಸ್ಸಿನ ಹಿಂದೆ ಶಾಲೆಯ ಶಾರೀರಿಕ ಶಿಕ್ಷಣ ಶಿಕ್ಷಕರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರ ಪ್ರಮುಖ ಪಾತ್ರವಹಿಸಿದ್ದು, ಶಾಲಾ ಕುಟುಂಬದ ಎಲ್ಲರೂ ಸಂತೋಷ ವ್ಯಕ್ತಪಡಿಸಿದರು.






