

ನೆಲ್ಯಾಡಿ: ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಂಗಳವಾರದಂದು ಗೌರವಾಧ್ಯಕ್ಷರಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ಸುಬ್ರಹ್ಮಣ್ಯ ಮಠ ಇವರ ಕೃಪಾಶೀರ್ವಾದಗಳೊಂದಿಗೆ ಶ್ರೀ ಶಬರೀಶ ಕಲಾಮಂದಿರದಲ್ಲಿ ನೆರವೇರಿತು.
ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಡಾ.ಸದಾನಂದ ಕುಂದರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಂಡಿತು. ಗತಕಾಲದ ವರದಿಯನ್ನು ಕಾರ್ಯದರ್ಶಿ ಸುಧೀರ್ ಕುಮಾರ್ ಅವರು ವಾಚಿಸಿದರು. ಕೋಶಾಧಿಕಾರಿ ವಿನೋದ್ ಕುಮಾರ್ ಅವರು ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ, ಉಪಾಧ್ಯಕ್ಷ ರವಿಚಂದ್ರ ಹೂಸವಕ್ಲು, ಜೊತೆ ಕಾರ್ಯದರ್ಶಿ ಮೋಹನ್ ಕಟ್ಟೆಮಜಲು, ಸದಸ್ಯರಾದ ರಾಕೇಶ್ ಎಸ್. ಗೌಡ, ರವಿಪ್ರಸಾದ್ ಶೆಟ್ಟಿ ರಾಮನಗರ, ರಘುನಾಥ ಕೆ., ರಮೇಶ್ ಬಾಣಜಾಲು, ಮಂಜುನಾಥ ಗೌಡ, ಉಮೇಶ್ ಪೂಜಾರಿ ಪೊಸೋಳಿಗೆ, ರಕ್ಷಿತ್ ಮಡಿವಾಳ, ಚಂದ್ರಶೇಖರ ಬಾಣಜಾಲು ಮೊದಲಾದವರು ಉಪಸ್ಥಿತರಿದ್ದರು.
ಡಾ.ಸದಾನಂದ ಕುಂದರ್ ಸ್ವಾಗತಿಸಿ ವಂದಿಸಿದರು.
ಹೊಸ ಆಡಳಿತ ಸಮಿತಿ ಆಯ್ಕೆ:
ಅಧ್ಯಕ್ಷರಾಗಿ ರವಿಚಂದ್ರ ಹೂಸವಕ್ಲು, ಉಪಾಧ್ಯಕ್ಷರಾಗಿ ರಘುನಾಥ. ಕೆ, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ಎಸ್ ಗೌಡ, ಜೊತೆ ಕಾರ್ಯದರ್ಶಿಯಾಗಿ ರಮೇಶ ಬಾಣಜಾಲು, ಕೋಶಾಧಿಕಾರಿಯಾಗಿ ಸುಧೀರ್ ಕುಮಾರ್ ಸದಸ್ಯರಾಗಿ ವಿನೋದ್ ಕುಮಾರ್, ದಯಾನಂದ ಆದರ್ಶ, ಉಮೇಶ ಪೂಜಾರಿ, ಪ್ರಹಲ್ಲಾದ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ರಾಮನಗರ, ಅಣ್ಣಿ ಎಳ್ತಿಮಾರ್, ಮೋಹನ್ ಕುಮಾರ್ ಕಟ್ಟೆಮಜಲು, ಶೇಖರ ಭಂಡಾರಿ, ಕೃಷ್ಣಪ್ಪ, ನಾರಾಯಣಶೆಟ್ಟಿ, ರಕ್ಷಿತ್, ಚಂದ್ರಶೇಖರ ಬಾಣಜಾಲು, ಗೌರವ ಸಲಹೆಗಾರರಾಗಿ ಶಿವದಾಸ್ ಹಾಗೂ ಡಾ.ಸದಾನಂದ ಕುಂದರ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಗಣೇಶ್ ರಶ್ಮಿ, ಅಂತರ್ ರಾಜ್ಯ ನಿರೂಪಕ ಸುರೇಶ ಪಡಿಪಂಡ, ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿಯ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ ಸೇರಿದಂತೆ ಗ್ರಾಮದ ಅನೇಕ ಭಕ್ತರು ಉಪಸ್ಥಿತರಿದ್ದರು.






