ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಶೇರ್ ಮಾಡಿ

ಕ್ರೀಡೆಯಿಂದ ನಾಯಕತ್ವ ಮತ್ತು ಪ್ರತಿಭೆ ಬೆಳವಣಿಗೆ — ಮಾಮಚ್ಚನ್ ಎಂ

ನೆಲ್ಯಾಡಿ: ಕ್ರೀಡೆಯಿಂದ ನಾಯಕತ್ವದ ಗುಣ ಬೆಳೆಯುವುದರೊಂದಿಗೆ ಪ್ರತಿಯೊಬ್ಬರಲ್ಲಿರುವ ಅಡಗಿದ ಪ್ರತಿಭೆಯನ್ನು ಹೊರತರುವ ಶಕ್ತಿ ಸ್ಪರ್ಧೆಗಳಿಗೆ ಇದೆ. ಆರೋಗ್ಯವೇ ನಮ್ಮ ನಿಜವಾದ ಸಂಪತ್ತು ಆಗಿರುವುದರಿಂದ ಹವ್ಯಾಸಕ್ಕಾಗಿ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಇದರ ಜಿಲ್ಲಾ ಕಾರ್ಯಾದ್ಯಕ್ಷರಾದ ಮಾಮಚ್ಚನ್.ಎಂ ಅವರು ಹೇಳಿದರು.

ಅವರು ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಹ ಸಂಚಾಲಕ ಡೀಕನ್ ಜಾರ್ಜ್ ಅವರು, ಕ್ರೀಡೆಯನ್ನು ಸದಾ ಕ್ರೀಡಾ ಮನೋಭಾವದಿಂದಲೇ ನೋಡಬೇಕು ಎಂದು ಹೇಳಿದರು. ನಮ್ಮ ಎದುರು ಸ್ಪರ್ಧಿಸುತ್ತಿರುವವರು ಶತ್ರುಗಳಲ್ಲ, ಸ್ನೇಹಿತರೇ ಆಗಿರುತ್ತಾರೆ. ಗೆಲುವು–ಸೋಲು ಎರಡನ್ನೂ ಸಮಾನವಾಗಿ ಸ್ವೀಕರಿಸಿ, ಅದರ ಅನುಭವವನ್ನು ಸವಿಯುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದು ಅವರು ಶುಭ ಹಾರೈಸಿದರು.

ಸೈಂಟ್ ಆಂಟನೀಸ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಶ್ರೀಧರ ಗೌಡ ಅವರು ಪ್ರಾಸ್ತಾವಿಕ ಮಾತನಾಡಿರು. ವೇದಿಕೆಯಲ್ಲಿ ಕನ್ನಡ ಮಾಧ್ಯಮ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಯಪ್ರಕಾಶ್, ಆಂಗ್ಲ ಮಾಧ್ಯಮ ವಿಭಾಗದ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಪಿಂಕಿ ಸಾಜು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ನಿಲಯವಾರು ವಿದ್ಯಾರ್ಥಿಗಳ ಪಥಸಂಚಲನ ಹಾಗೂ ವಿದ್ಯಾರ್ಥಿಗಳ ಆಕರ್ಷಕ ವ್ಯಾಯಾಮ ಪಥಸಂಚಲನ ಎಲ್ಲರ ಗಮನ ಸೆಳೆಯಿತು. ದೈಹಿಕ ಶಿಕ್ಷಕರಾದ ರಾಜೇಶ್ ರೈ ಅವರು ಸ್ವಾಗತಿಸಿದರು, ಜಿಮ್ಸನ್ ವರ್ಗೀಸ್ ವಂದಿಸಿದರು. ಶಿಕ್ಷಕ ಯಶೋಧರ ಕಾರ್ಯಕ್ರಮ ನಿರೂಪಿಸಿದರು.

  •  

Leave a Reply

error: Content is protected !!