

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಸ್ಥಳಮನೆ(ಅರಮನೆ) ನಿವಾಸಿ, ಕೃಷಿಕ ಚಂದ್ರರಾಜ ಶೆಟ್ಟಿ(81ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಡಿ.23ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರ ಉಪ್ಪಿನಂಗಡಿ ಶುಭ ಅಟೋ ವರ್ಕರ್ಸ್ ನ ಮಾಲಕ ದೇವಪಾಲ ಶೆಟ್ಟಿ, ಕೆ ಎಸ್ ಆರ್ ಟಿ ಸಿ ಚಾಲಕ ಸಂತೋಷ್ಕುಮಾರ್, ನ್ಯೂಜಿಲ್ಯಾಂಡ್ನಲ್ಲಿ ಉದ್ಯೋಗಿಯಾಗಿರುವ ಸುರೇಶ್, ಕೃಷಿಕ ಮನೋಹರ ಜೈನ್, ಸೊಸೆಯಂದಿರು, ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ.






