ಅಂತರ್ ಜಿಲ್ಲಾ ಮಹಿಳೆಯರ ವಾಲಿಬಾಲ್ ಪಂದ್ಯಾಟ : ಉಜಿರೆ ಎಸ್.ಡಿ.ಎಂ ಕಾಲೇಜಿಗೆ ಪ್ರಶಸ್ತಿ

ಶೇರ್ ಮಾಡಿ

ಉಜಿರೆ: ಉಡುಪಿ ಜಿಲ್ಲೆಯ ಪೆರಂಪಳ್ಳಿಯಲ್ಲಿ ಪವರ್ ಫ್ರೆಂಡ್ಸ್ ಪೆರಂಪಳ್ಳಿ ಸಂಯುಕ್ತ ಆಶ್ರಯ ಹಾಗೂ ಅನಿಲ್ ಗೋನ್ಸಾಲ್ವಿಸ್ ನೇತೃತ್ವದಲ್ಲಿ ನಡೆದಂತಹ ‘ಪವರ್ ಟ್ರೋಫಿ – 2026 ಅಂತರ್ ಜಿಲ್ಲಾ’ ಬಾಲಕಿಯರ ಮುಕ್ತ ವಿಭಾಗದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಭಾಗವಹಿಸಿದ್ದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ತಂಡವು ಪ್ರಥಮ ಸ್ಥಾನ ಪಡೆಯುವ ಮೂಲಕ ಪಂದ್ಯಾಟದ ಚಾಂಪಿಯನ್ ಗಳಾಗಿದ್ದಾರೆ.

ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿನಿ ಶ್ರೀಯಾ ಉತ್ತಮ ಅಟ್ಯಾಕರ್ , ವಿದ್ಯಾರ್ಥಿನಿ ಪ್ರಿಯಾಂಕ ಬೆಸ್ಟ್ ಆಲ್ ರೌಂಡರ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು. ತಂಡದಲ್ಲಿ ವಿದ್ಯಾರ್ಥಿಗಳಾದ ಹರಿಣಿ, ಐಶ್ವರ್ಯ, ಅಂಜಲಿ, ಇಂಚರ, ಸಾಕ್ಷಿ, ಸ್ಮಿತಾ, ಲಾಸ್ಯ, ಅಪೂರ್ವ, ಸ್ಮಿತೂಜ್ ಮತ್ತು ಶಗುಣ್ ಪಾಲ್ಗೊಂಡಿದ್ದರು. ತಂಡಕ್ಕೆ ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್ ತರಬೇತಿಯನ್ನು ನೀಡಿದ್ದಾರೆ.

ವಿಜೇತ ತಂಡಕ್ಕೆ ಎಸ್.ಡಿ.ಎಂ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಕಾಲೇಜಿನ ಪ್ರಾಚಾರ್ಯ ಪ್ರೊ. ವಿಶ್ವನಾಥ್ ಪಿ, ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

  •  

Leave a Reply

error: Content is protected !!