ನೆಲ್ಯಾಡಿ ಟೀಮ್ ಸಿಂಧೂರ ವತಿಯಿಂದ ಕೃಷಿ ಮಾಹಿತಿ ಕಾರ್ಯಾಗಾರ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಟೀಮ್ ಸಿಂಧೂರ ಇದರ ವತಿಯಿಂದ ಕೃಷಿ ಮಾಹಿತಿ ಕಾರ್ಯಾಗಾರವು ಸೋಮವಾರದಂದು ಕುತ್ರಾಡಿ ಹಾರ್ಪಳದ ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ.ವಿಶು ಕುಮಾರ್ ಅವರು ಅಡಿಕೆ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಎಲೆಚುಕ್ಕಿ ರೋಗ ಸೇರಿದಂತೆ, ಅಡಿಕೆ, ತೆಂಗು ಹಾಗೂ ಕರಿಮೆಣಸು ಬೆಳೆಗಳ ಸಮಗ್ರ ನಿರ್ವಹಣೆ, ರೋಗನಿರೋಧಕ ಕ್ರಮಗಳು, ಪೋಷಕಾಂಶಗಳ ಬಳಕೆ ಹಾಗೂ ಇಳುವರಿ ಹೆಚ್ಚಿಸುವ ವಿಧಾನಗಳ ಕುರಿತು ಕೃಷಿಕರಿಗೆ ಪ್ರಾಯೋಗಿಕ ಮಾಹಿತಿಯನ್ನು ನೀಡಿದರು. ಇಂದಿನ ಪರಿಸ್ಥಿತಿಯಲ್ಲಿ ವೈಜ್ಞಾನಿಕ ಕೃಷಿ ಕ್ರಮಗಳನ್ನು ಅಳವಡಿಸಿಕೊಂಡರೆ ಉತ್ತಮ ಉತ್ಪಾದನೆ ಸಾಧ್ಯವೆಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಟೀಮ್ ಸಿಂಧೂರ ಇದರ ಅಧ್ಯಕ್ಷ ತಿಮ್ಮಪ್ಪ ಗೌಡ ವಹಿಸಿ ಮಾತನಾಡಿದ ಅವರು ರೈತರಿಗೆ ನೇರವಾಗಿ ಉಪಯುಕ್ತವಾಗುವ ಮಾಹಿತಿ ನೀಡುವುದು ಇಂತಹ ಕಾರ್ಯಾಗಾರಗಳ ಉದ್ದೇಶ. ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡರೆ ಕೃಷಿಯೇ ಜೀವನಾಧಾರವಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಸುಂದರ ಗೌಡ ಆತ್ರಿಜಾಲು, ಪ್ರಗತಿಪರ ಕೃಷಿಕ ಗಣಪಯ್ಯ ಗೌಡ ಹೊಸಮನೆ, ಯಾದವ ಶೆಟ್ಟಿ ರಾಮನಗರ ಉಪಸ್ಥಿತರಿದ್ದು ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಯಶಸ್ಸಿಗಾಗಿ ನೆಲ್ಯಾಡಿ ಟೀಮ್ ಸಿಂಧೂರ ಸದಸ್ಯರು ಸಹಕರಿಸಿದರು. ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ 80ಕ್ಕೂ ಮಿಕ್ಕಿದ ಕೃಷಿಕರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

ಅಶೋಕ್ ಆಚಾರ್ಯ ಪ್ರಾರ್ಥಿಸಿದರು, ನಿತೇಶ್ ಪುಳಿತ್ತಡಿ ಸ್ವಾಗತಿಸಿದರು, ಸುರೇಶ್ ಪಡಿಪಂಡ ನಿರೂಪಿಸಿದರು, ಶೀನಪ್ಪ ಗೌಡ ಬರಮೇಲು ವಂದಿಸಿದರು.

ಅನ್ನಪ್ರಸಾದಕ್ಕೆ ವಿಶೇಷ ವ್ಯವಸ್ಥೆ:
ಭಕ್ತರ ಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಅನ್ನಪ್ರಸಾದ ವ್ಯವಸ್ಥೆಯನ್ನು ಮುಖ್ಯ ಅನ್ನಪ್ರಸಾದ ಭೋಜನ ಶಾಲೆಯ ಜೊತೆಗೆ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿಯೂ ಬಫೆ ವ್ಯವಸ್ಥೆಯೊಂದಿಗೆ ಕಲ್ಪಿಸಲಾಗಿತ್ತು. ಸಾವಿರಾರು ಭಕ್ತರು ಶಿಸ್ತುಬದ್ಧವಾಗಿ ಅನ್ನಪ್ರಸಾದ ಸ್ವೀಕರಿಸಿದರು.

Leave a Reply

error: Content is protected !!