



ಬೆಳ್ತಂಗಡಿ : ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಮುಂದಿನ ಮೂರು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆಯನ್ನು ಬುಧವಾರ ಉಜಿರೆಯಲ್ಲಿ ಜರಗಿದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾಡಲಾಯಿತು.
ಅಧ್ಯಕ್ಷರಾಗಿ ತ್ರಿವಿಕ್ರಮ ಹೆಬ್ಬಾರ್, ಕಾರ್ಯದರ್ಶಿಯಾಗಿ ಸುಷ್ಮಾ ಭಿಡೆ, ಉಪಾಧ್ಯಕ್ಷರಾಗಿ ಡಾ.ಶಶಿಧರ ಡೋಂಗ್ರೆ,ಲತಾ ಮಹಾದೇವ ಭಟ್, ಖಜಾಂಚಿಯಾಗಿ ಪ್ರಭಾಕರ ಹೆಬ್ಬಾರ್, ಜತೆ ಕಾರ್ಯದರ್ಶಿಯಾಗಿ ಪ್ರಜ್ಞಾ ಮಹೆಂದಳೆ,ಕಾಶೀನಾಥ ಗೋಗಟೆ, ಕಾರ್ಯಕಾರಿ ಸದಸ್ಯರಾಗಿ ಧನಂಜಯ ಭಿಡೆ, ದಿಶಾ ಪಟವರ್ಧನ್, ಶಶಾಂಕ ಮರಾಠೆ, ಪಾಂಡುರಂಗ ಮರಾಠೆ, ಗೀತಾ ಬೆಂಡೆ, ವರದಶಂಕರ ದಾಮಲೆ, ವೃಷಾಂಕ ಖಾಡಿಲ್ಕರ್, ಅವಿನಾಶ್ ಗೋಖಲೆ,ಪ್ರಜ್ಞಾ ಹೆಬ್ಬಾರ್, ವಿವೇಕ್ ಕೇಳ್ಕರ್. ಸಲಹಾ ಸಮಿತಿ ಸದಸ್ಯರಾಗಿ ವಾಸುದೇವ ಗೋಖಲೆ, ಅಶ್ವಿನಿ ಎ.ಹೆಬ್ಬಾರ್, ಪ್ರಹ್ಲಾದ ಫಡಕೆ, ನರಸಿಂಹ ಪಾಳಂದ್ಯೆ,ಗೋಪು ಗೋಖಲೆ, ಚಂದ್ರಕಾಂತ ಗೋರೆ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ನಾರಾಯಣ ಫಡಕೆ ಸರ್ವಾನುಮತದಿಂದ ಆಯ್ಕೆಯಾದರು.





