




ಕೊಕ್ಕಡ: ಶಿಬಾಜೆ ಗ್ರಾಮದ ಸಾರಾ ಫಾರ್ಮ್‌ನಲ್ಲಿ 2022 ಡಿಸೆಂಬರ್ 18ರಂದು ನಡೆದ ಶ್ರೀಧರ(30) ಕೊಲೆ ಪ್ರಕರಣದ ಮರುತನಿಖೆ ಎಸ್‌ಐಟಿ ಅಧಿಕಾರಿಗಳು ನಡೆಸುತ್ತಿರುವ ಬೆನ್ನಲ್ಲೇ ಪ್ರಕರಣದ ದೂರುದಾರನಾಗಿರುವ ಹರೀಶ್ ಬಿ. ಮುಗೇರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮಾ.11ರಂದು ರಾತ್ರಿ ಸುಮಾರು 9:45ರ ವೇಳೆಗೆ ಶಿಬಾಜೆಯ ಸಾರಾ ಫಾರ್ಮ್ ತೋಟದಲ್ಲಿ ಹರೀಶ್ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದಕ್ಕೂ ಮೊದಲು ಮಾ.3ರಂದು ಎಸ್‌ಐಟಿ ಅಧಿಕಾರಿಗಳು ವಿಚಾರಣೆಗಾಗಿ ನೋಟಿಸ್ ನೀಡಿ ಕರೆಯಿಸಿಕೊಂಡು ಶ್ರೀಧರ ಕೊಲೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದರು. ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನು ಎಂಬುದು ನಿಖರವಾಗಿ ತಿಳಿದುಬಂದಿಲ್ಲ.





