ಕನ್ಯಾಡಿ ಸೇವಾಭಾರತಿಯಿಂದ ದಿವ್ಯಾಂಗ ಯುವತಿಗೆ ಗಾಲಿಕುರ್ಚಿ ವಿತರಣೆ

ಶೇರ್ ಮಾಡಿ
ಕನ್ಯಾಡಿ ಸೇವಾಭಾರತಿಯಿಂದ ದಿವ್ಯಾಂಗ ಯುವತಿಗೆ ಗಾಲಿಕುರ್ಚಿ ವಿತರಣೆ

ಕೊಕ್ಕಡ: ಕನ್ಯಾಡಿ ಸೇವಾಭಾರತಿಯ ವತಿಯಿಂದ ಬೆನ್ನುಹುರಿ ಅಪಘಾತಕ್ಕೊಳಗಾದ ರಾಣೆಬೆನ್ನೂರಿನ ಕು. ಚೈತ್ರಾ ಅವರಿಗೆ ಗಾಲಿಕುರ್ಚಿ ವಿತರಿಸಲಾಯಿತು.

ಬೆಂಗಳೂರು ಎಪಿಡಿ ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಗಳನ್ನು ವಿತರಿಸುವ ಯೋಜನೆಯನ್ನು ಸಂಸ್ಥೆ ಹೊಂದಿದ್ದು, ಅದರಂತೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ 30 ಗಾಲಿಕುರ್ಚಿಗಳನ್ನು ವಿತರಿಸಲಾಗಿತ್ತು.

ಈ ತಿಂಗಳಲ್ಲಿ ಮತ್ತಷ್ಟು 32 ಗಾಲಿಕುರ್ಚಿಗಳನ್ನು ವಿತರಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಅದರ ಅಂಗವಾಗಿ ಅರ್ಹ ಫಲಾನುಭವಿಯಾಗಿರುವ ರಾಣೆಬೆನ್ನೂರಿನ ಕು. ಚೈತ್ರಾ ಅವರಿಗೆ ಸೌತಡ್ಕ ಸೇವಾಧಾಮದ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದಲ್ಲಿ ಗಾಲಿಕುರ್ಚಿಯನ್ನು ಹಸ್ತಾಂತರಿಸಲಾಯಿತು.

ಸಂಸ್ಥೆಯ ಹಿತೈಷಿ ಹಾಗೂ ದಾನಿಗಳಾದ ಕೊಕ್ಕಡದ ಗಣೇಶ್ ಪಿ.ಐತಾಳ್ ಅವರು ಗಾಲಿಕುರ್ಚಿಯನ್ನು ನೀಡಿದರು ಹಾಗೂ ಇದೇ ಸಂದರ್ಭದಲ್ಲಿ ಅವರು ಸೇವಾಧಾಮ ಪುನಶ್ಚೇತನ ಕೇಂದ್ರಕ್ಕೆ ಒಂದು ಹೊತ್ತಿನ ಊಟದ ದೇಣಿಗೆಯನ್ನು ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಸೇವಾಭಾರತಿಯ ಉಪಾಧ್ಯಕ್ಷ ಬಾಲಕೃಷ್ಣ ಹಾಗೂ ಸಿಬ್ಬಂದಿ ವರ್ಗದವರು ಸಂಸ್ಥೆಯ ಪರವಾಗಿ ದೇಣಿಗೆಯನ್ನು ಸ್ವೀಕರಿಸಿ ದಾನಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.

Leave a Reply

error: Content is protected !!