




ಉಜಿರೆ: ಶ್ರೀ ಕ್ಷೇತ್ರ ಉಜಿರೆಯ ವಿಜಯಗೋಪುರ ಲೋಕಾರ್ಪಣೆ, ಬ್ರಹ್ಮರಥ ಮತ್ತು ಪುಷ್ಪರಥ ಸಮರ್ಪಣೆ ಹಾಗೂ ಅಷ್ಟಬಂಧ ಪುನಃ ಪ್ರತಿಷ್ಠಾ ಶುಭ ಸಂದರ್ಭದಲ್ಲಿ “ಜಗದೋದ್ಧಾರ ಶ್ರೀ ಜನಾರ್ದನ” ಆಲ್ಬಮ್ ಹಾಡಿನ ಪೋಸ್ಟರನ್ನು ಖ್ಯಾತ ಗಾಯಕ ಶಶಿಧರ್ ಕೋಟೆ ಅವರು ಭವ್ಯ ವೇದಿಕೆಯಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಶ್ರೀಚಾಮುಂಡೇಶ್ವರಿ ಕ್ಷೇತ್ರ ಆರಿಕೊಡಿ ಬೆಳಾಲು ನಿರ್ಮಾಣದಲ್ಲಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೊಡಿ ಹಾಗೂ ಉಜಿರೆ ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣಪಡ್ವೆಟ್ನಾಯರವರ ಶುಭ ಆಶೀರ್ವಾದದೊಂದಿಗೆ ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿ ಅರ್ಪಿಸಿರುವ ಈ ಆಲ್ಬಮ್ ಹಾಡು ಮೂಡಿಬಂದಿದೆ.
ವಿ.ಹರೀಶ್ ನೆರಿಯ ಅವರ ಸಾಹಿತ್ಯದಲ್ಲಿ, ಶಶಿಧರ್ ಬೆಳಾಲು ಅವರ ಗಾಯನದಲ್ಲಿ ಹಾಗೂ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳದ ನೃತ್ಯ ಸಂಯೋಜನೆಯಲ್ಲಿ ಈ ಭಕ್ತಿಗೀತೆ ರೂಪುಗೊಂಡಿದೆ.
ಈ ಸಂದರ್ಭದಲ್ಲಿ ಉಜಿರೆ ವರ್ತಕರ ಸಂಘದ ಅಧ್ಯಕ್ಷರಾದ ಪ್ರಸಾದ್ ಬಿ.ಎಸ್ ಹಾಗೂ ಪದಾಧಿಕಾರಿಗಳು, ಸಾಹಿತ್ಯ ರಚಿಸಿದ ವಿ. ಹರೀಶ್ ನೆರಿಯ, ಗಾಯಕ ಶಶಿಧರ್ ಬೆಳಾಲು, ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳದ ಸಂಘಟಕಿ ಶ್ರೀಮತಿ ಬೇಬಿ ಉಮೇಶ್ ಹಾಗೂ ಭಕ್ತಿ ಹೆಜ್ಜೆ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಆಲ್ಬಮ್ ಹಾಡು ಹೊಳಪು ಮೀಡಿಯಾ ಯೂಟ್ಯೂಬ್ ಚಾನಲ್‌ನಲ್ಲಿ ಲೋಕಾರ್ಪಣೆಗೊಂಡಿದೆ.





