ನಾಟಿ ವೈದ್ಯ ಕಲ್ಲುಗುಡ್ಡೆ ಅಪ್ಪೆಜಕ್ಕೆಲ್ ಕಾಂತಪ್ಪ ನಿಧನ

ಶೇರ್ ಮಾಡಿ
ನಾಟಿ ವೈದ್ಯ ಕಲ್ಲುಗುಡ್ಡೆ ಅಪ್ಪೆಜಕ್ಕೆಲ್ ಕಾಂತಪ್ಪ ನಿಧನ

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಪ್ಪೆಜಕ್ಕೆಲ್ ನಿವಾಸಿ ದಿ. ಅಂಗಾರ ಹಾಗೂ ದಿ. ಲಿಂಗಮ್ಮ ದಂಪತಿಯ ಪುತ್ರ ಕಾಂತಪ್ಪ ಕಲ್ಲುಗುಡ್ಡೆ (63) ಅವರು ಮಾ.15ರಂದು ಸ್ವಗೃಹದಲ್ಲಿ ಅಸೌಖ್ಯದಿಂದ ನಿಧನ ಹೊಂದಿದರು.

ಕಾಂತಪ್ಪ ಅವರು ಕಟ್ಟಡ ಕಾರ್ಮಿಕರಾಗಿದ್ದು, ಅಡಿಕೆ ಹಾಳೆಯಲ್ಲಿ ಮುಟ್ಟಾಳೆ ಕಟ್ಟುವ ಕಾಯಕವನ್ನೂ ನಡೆಸುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ನಾಟಿ ವೈದ್ಯರಾಗಿ ಗುರುತಿಸಿಕೊಂಡಿದ್ದ ಅವರು ಮೂಲವ್ಯಾಧಿ ಮತ್ತು ಹಲ್ಲು ನೋವಿಗೆ ಸಂಬಂಧಿಸಿದ ಮದ್ದುಗಳನ್ನು ನೀಡುತ್ತಿದ್ದರು.

ಮೃತರು ಪತ್ನಿ ಸೇಸಮ್ಮ, ಪುತ್ರಿಯರಾದ ಪೂರ್ಣಿಮಾ, ಪುಷ್ಪಾ, ಭವಿತಾ, ಪುತ್ರರಾದ ಪ್ರಸಾದ್ ಮತ್ತು ನಿತಿನ್ ಅವರನ್ನು ಅಗಲಿದ್ದಾರೆ. ಸಹೋದರರಾದ ದೈವ ನರ್ತಕ ಕಿಟ್ಟು, ಕಡಬ ಉಪ ತಹಶಿಲ್ದಾರ್ ಗೋಪಾಲ ಕೆ., ಶಿಕ್ಷಕರಾದ ಆನಂದ ಹಾಗೂ ರಾಮಕೃಷ್ಣ, ಸಹೋದರಿಯರಾದ ನೀಲು, ರಾಮಕ್ಕ ಮತ್ತು ಸುಂದರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
.

Leave a Reply

error: Content is protected !!