




ಮಂಗಳೂರು: ಗುರುವಾರ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಶುಕ್ರವಾರ (ಮಾ.20) ಕರಾವಳಿಯಾದ್ಯಂತ (ದ.ಕ – ಉಡುಪಿ) ಈದುಲ್ ಫಿತ್ ಹಬ್ಬವನ್ನು ನಾಳೆ ಆಚರಿಸಲಾಗುವುದು ಎಂದು ಜಿಲ್ಲಾ ಖಾಝಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುವಾರ ಸೂರ್ಯಾಸ್ತದ ನಂತರ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಆಗಿರುವ ಅಹ್ಮದ್ ಮುಸ್ಲಿಯಾರ್ ಅಲ್ ಅಝರಿ ನಾಳೆ ಶವ್ವಾಲ್ 1ರಂದು ಈದುಲ್ ಫಿತ್ ಹಬ್ಬವನ್ನು ಆಚರಿಸುವುದಾಗಿ ಘೋಷಿಸಿದ್ದಾರೆ.





