




ನೆಲ್ಯಾಡಿ: ಆಮಂತ್ರಣ ಸಾಂಸ್ಕೃತಿಕ ಹಾಗೂ ಸಾಹಿತ್ಯ ವೇದಿಕೆ ಕರ್ನಾಟಕ ವತಿಯಿಂದ ಕಡಬ ತಾಲೂಕು ಪದಾಧಿಕಾರಿಗಳ ಪದಸ್ವೀಕಾರ ಹಾಗೂ ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಏಪ್ರಿಲ್ 5ರಂದು ಬೆಳಿಗ್ಗೆ 9ಗಂಟೆಯಿಂದ ನೆಲ್ಯಾಡಿ ಸಂತ ಜಾರ್ಜ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಭವ್ಯವಾಗಿ ನಡೆಯಲಿದ್ದು, ಸ್ವರಚಿತ ಕವನ ವಾಚನ, ಸಂಗೀತ ಗಾಯನ, ಹಾಗೂ ಸಾಧಕರಿಗೆ ಸನ್ಮಾನ ಮತ್ತು ಗೌರವಾರ್ಪಣೆ ಪ್ರಮುಖ ಆಕರ್ಷಣೆಯಾಗಲಿದೆ. ಜೊತೆಗೆ ಸಭಾಸದರಿಗೆ ಅದೃಷ್ಟದ ಬಹುಮಾನಗಳು ಹಾಗೂ ‘ಭಾವ ಲಹರಿ’ ಸಂಗೀತ ಗಾಯನ ಕಾರ್ಯಕ್ರಮವೂ ನಡೆಯಲಿದೆ.
ಆಮಂತ್ರಣ ಸಾಂಸ್ಕೃತಿಕ, ಸಾಹಿತ್ಯ ವೇದಿಕೆಯ ಮುಖ್ಯಸ್ಥ ವಿಜಯಕುಮಾರ್ ಜೈನ್, ಜಿಲ್ಲಾಧ್ಯಕ್ಷರಾದ ವಿಂಧ್ಯಾ ಎಸ್ ರೈ ಸೇರಿದಂತೆ ಹಲವಾರು ಅತಿಥಿ ಗಣ್ಯರು, ಕವಿಗಳು ಮತ್ತು ಸಂಗೀತ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕವನವಾಚನವನ್ನು ಮಾಡಲು ಆಸಕ್ತರಾಗಿರುವ ಕವಿಗಳಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಕವನಗಳನ್ನು ಮಾರ್ಚ್ 25ರೊಳಗೆ 9741132215 ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.





