ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಹಿರಿಯ ನಾಗರಿಕರ ದಿನಾಚರಣೆ

ಶೇರ್ ಮಾಡಿ
ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಹಿರಿಯ ನಾಗರಿಕರ ದಿನಾಚರಣೆ

ನೆಲ್ಯಾಡಿ: ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವತಿಯಿಂದ ಮಾ.19ರಂದು ಹಿರಿಯ ನಾಗರಿಕರ ದಿನವನ್ನು ಭಕ್ತಿಪೂರ್ವಕವಾಗಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ವಿಶೇಷವಾಗಿ ಬಲಿಪೂಜೆಯಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸಲಾಗಿದ್ದು, ಬಳಿಕ ಅವರಿಗೆ ಸನ್ಮಾನ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅವು ಹಿರಿಯರನ್ನು ಸಂತೋಷಪಡಿಸಿತು. ನೆಲ್ಯಾಡಿ ಹಾಗೂ ಆರ್ಲ ಸೆಂಟ್ ಮೇರೀಸ್ ಚರ್ಚ್‌ನ ಸುಮಾರು 50ಕ್ಕೂ ಹೆಚ್ಚು ಹಿರಿಯ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಪುಣ್ಯ ಕ್ಷೇತ್ರದ ಧರ್ಮಗುರು ರೆ.ಫಾ.ಶಾಜಿ ಮಾತ್ಯು ಮಾತನಾಡಿ ಹಿರಿಯ ನಾಗರಿಕರ ಆರೈಕೆ ಸಮಾಜದ ಪ್ರಥಮ ಕರ್ತವ್ಯವಾಗಿದ್ದು, ಅವರ ಅನುಭವ ಮತ್ತು ಆಶೀರ್ವಾದಗಳು ನಮ್ಮ ಸಮಾಜದ ಅಮೂಲ್ಯ ಸಂಪತ್ತು ಎಂದರು.

ಮಾತೃಸಂಘದ ಸಿಸ್ಟರ್ ಲಿಸ್ ಮಾತ್ಯು, ಸಿಸ್ಟರ್ ತೆರೇಸಾ ಕುರ್ಯನ್, ಸುಜಾ ಜೇಮ್ಸ್, ಲಿಸಿ, ರಿಯಾ, ಸ್ಮಿತಾ, ಅನುಷಾ, ಮಿನಿ, ಸುಜಿತಾ, ಸೆನ್ಸಿ, ಸೀಮಾ ಹಾಗೂ ಪ್ರಾಂತ್ಯದ ಟ್ರೆಷರರ್ ಸಿಮಿ ಸೇರಿದಂತೆ ಹಲವರು ಕಾರ್ಯಕ್ರಮದ ನೇತೃತ್ವ ನೀಡಿ ಸಹಕರಿಸಿದರು.

Leave a Reply

error: Content is protected !!