ಗ್ಯಾಸ್ ಪಂಪ್‌ನಲ್ಲಿ ಗಲಾಟೆ: ಸಿಬ್ಬಂದಿಗೆ ಹಲ್ಲೆ, ₹48 ಸಾವಿರ ಆಸ್ತಿ ನಷ್ಟ

ಶೇರ್ ಮಾಡಿ
ಗ್ಯಾಸ್ ಪಂಪ್‌ನಲ್ಲಿ ಗಲಾಟೆ: ಸಿಬ್ಬಂದಿಗೆ ಹಲ್ಲೆ, ₹48 ಸಾವಿರ ಆಸ್ತಿ ನಷ್ಟ

ಬಂಟ್ವಾಳ: ಪಟ್ಟಣದ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬೊಗೋಡಿ ಪ್ರದೇಶದಲ್ಲಿರುವ ಗ್ಯಾಸ್ ಪಂಪ್ ಏಜೆನ್ಸಿಯಲ್ಲಿ ಗಲಾಟೆ ನಡೆಸಿ ಸಿಬ್ಬಂದಿಗೆ ಹಲ್ಲೆ ಮಾಡಿ ಆಸ್ತಿಗೆ ಹಾನಿ ಉಂಟು ಮಾಡಿದ ಘಟನೆ ಮಾ.20 ರಂದು ಸಂಜೆ ನಡೆದಿದೆ.

ಕುನಲ್ ಭುಹ್ನಿಯಾ ಅವರು ಗ್ಯಾಸ್ ಪಂಪ್ ಏಜೆನ್ಸಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸಂಜೆ ವೇಳೆಗೆ ಕೆಎ 19 ಎಸಿ 2102 ನೇ ನೊಂದಾವಣಿ ಸಂಖ್ಯೆಯ ಆಟೋ ರಿಕ್ಷಾವನ್ನು ಅದರ ಚಾಲಕನಾದ ಸಜಿಪಮೂಡಾ ನಿವಾಸಿ ಅಫ್ರೀಝ್(28) ಎಂಬಾತನು ಚಾಲನೆ ಮಾಡಿಕೊಂಡು ಬಂದು ಏಜೆನ್ಸಿಯೊಳಗೆ ಪ್ರವೇಶಿಸಿದ್ದಾನೆ. ಈ ವೇಳೆ ಕಛೇರಿ ಸಿಬ್ಬಂದಿಯಾದ ಅಶ್ವಿನ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಬಳಿಕ ಏಜೆನ್ಸಿಯಿಂದ ಹೊರಬಂದು ಸೊತ್ತುಗಳಿಗೆ ಹಾನಿ ಮಾಡಿದ್ದು, ಸುಮಾರು ₹48,000/-ಗಳಷ್ಟು ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ನೀಡಲಾದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 36/2026 ರಂತೆ ಕಲಂ 115(2), 287, 324(4), 351(2), 352 BNS 2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

error: Content is protected !!