‘ಶ್ರೀ ಗಣೇಶ್ ಆಯಿಲ್ ಮಿಲ್ & ಡ್ರೈ ಫ್ರೂಟ್ಸ್’ ನೂತನ ಶಾಖೆ ಎಂಜಿರದಲ್ಲಿ ಶುಭಾರಂಭ

‘ಶ್ರೀ ಗಣೇಶ್ ಆಯಿಲ್ ಮಿಲ್ & ಡ್ರೈ ಫ್ರೂಟ್ಸ್’ ನೂತನ ಶಾಖೆ ಎಂಜಿರದಲ್ಲಿ ಶುಭಾರಂಭ

ನೆಲ್ಯಾಡಿ: ಇಲ್ಲಿನ ಗಣೇಶ್ ಆಯಿಲ್ ಮಿಲ್ ಸಂಸ್ಥೆಯ ನೂತನ ಶಾಖೆ ‘ಶ್ರೀ ಗಣೇಶ್ ಆಯಿಲ್ ಮಿಲ್ & ಡ್ರೈ ಫ್ರೂಟ್ಸ್’ ಮಾ.21ರಂದು ಎಂಜಿರ ಮಲ್ನಾಡ್ ಹೋಟೆಲ್ ಸಮೀಪದ ವಿಶ್ವಕರ್ಮ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ನೆಲ್ಯಾಡಿಯ ಹಿರಿಯ ಉದ್ಯಮಿ ಸುಬ್ರಮಣ್ಯ ಆಚಾರ್ಯ ದೀಪ ಬೆಳಗುವ ಮೂಲಕ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಕೊಕ್ಕಡ ಸಿ.ಎ. ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಮಾತನಾಡಿ ಈಗಾಗಲೇ ನೆಲ್ಯಾಡಿಯಲ್ಲಿ ಯಶಸ್ವಿಯಾಗಿ ವ್ಯವಹಾರ ನಡೆಸುತ್ತಿರುವ ಉದಯ್ ಕುಮಾರ್ ಗೌಡ ಅವರ ಇದು ಎರಡನೇ ಶಾಖೆಯಾಗಿದ್ದು, ಅವರ ಸಾಮಾಜಿಕ ಸೇವಾ ಮನೋಭಾವ ಹಾಗೂ ಸಜ್ಜನಿಕೆಯನ್ನು ಪ್ರಶಂಸಿಸಿ, ಹೊಸ ಶಾಖೆಯಲ್ಲಿಯೂ ಯಶಸ್ಸು ಸಾಧಿಸಲಿ ಎಂದು ಆಶಿಸಿದರು.

ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ ಡಾ.ವರ್ಗಿಸ್ ಕೈಪನಡ್ಕ, ಪುತ್ತೂರು ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ಗೌಡ ಇಚಲಂಪಾಡಿ, ನೆಲ್ಯಾಡಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯ ರವಿಪ್ರಸಾದ್ ಶೆಟ್ಟಿ ರಾಮನಗರ, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ಸತೀಶ್ ಕೆ ಮಾತನಾಡಿ ಶುಭ ಕೋರಿದರು.

ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಮೋದ್ ಕುಮಾರ್ ರೈ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಚಂದ್ರಶೇಖರ್, ಕೌಕ್ರಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯೆ ಸವಿತಾ ಸರ್ವೋತ್ತಮ ಗೌಡ, ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಜಯರಾಜ್ ಕೊರಮೇರು, ಕಟ್ಟಡದ ಮಾಲಕರಾದ ರೇಷ್ಮಾ ಹಾಗೂ ಶಶಿ ಕೆ, ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ಹೇಮಂತ್ ಗೌಡ, ಪ್ರೇಮಾ ಮತ್ತು ಚೆನ್ನಪ್ಪ ಗೌಡ, ಸಂಸ್ಥೆಯ ಮಾಲಕ ಚಂದ್ರಿಕಾ, ನಿವೃತ್ತ ದೈಹಿಕ ಶಿಕ್ಷಕ ಉಲಹನ್ನಾನ್ ಪಿ.ಎಂ, ಉದ್ಯಮಿ ಟಿಟ್ಟಿ, ಬಾಲಕೃಷ್ಣ ಗೌಡ ತೋಟ, ರಾಮಣ್ಣ ಶೆಟ್ಟಿ ದೊಂತಿಲ, ರವಿ ಭಟ್ ದೊಂತಿಲ, ಶೈಲಾ, ವಿಶ್ವನಾಥ್ ಗೌಡ ಕೊರಮೇರು, ಜನಾರ್ಧನ್ ಗೌಡ, ನವೀನ್ ರೆಖ್ಯಾ, ಕೃಷ್ಣ ಗೌಡ ಕನ್ಯಾಡಿ ಮೊದಲಾದವರು ಸೇರಿದಂತೆ ಅನೇಕ ಅತಿಥಿ ಗಣ್ಯರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ಉದಯ್ ಕುಮಾರ್ ಗೌಡ ವಂದಿಸಿದರು. ಸುಧೀರ್ ಕುಮಾರ್ ಕೆ.ಎಸ್ ನಿರೂಪಿಸಿದರು.

Leave a Reply

error: Content is protected !!