ಮೊಬೈಲ್ ಬ್ಯಾಟರಿ ಸ್ಫೋಟ: ಯುವಕನಿಗೆ ಗಾಯ

ಶೇರ್ ಮಾಡಿ
ಮೊಬೈಲ್ ಬ್ಯಾಟರಿ ಸ್ಫೋಟ: ಯುವಕನಿಗೆ ಗಾಯ

ಸುಳ್ಯ: ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಕಲ್ಮಕಾರಿನ ಗುರುಪ್ರಸಾದ್ ನಿಡುಬೆ ಎಂಬವರ ಕಾಲಿಗೆ ಗಾಯವಾದ ಘಟನೆ ಮಾ.23ರಂದು ಬೆಳಗ್ಗೆ ವರಿದಿಯಾಗಿದೆ.

ಗುರುಪ್ರಸಾದ್ ಅವರು ಒಂದು ವರ್ಷ ಹಿಂದೆ ಖರೀದಿಸಿದ್ದ ಮೊಬೈಲ್ ಅನ್ನು ತನ್ನ ಪ್ಯಾಂಟ್ ನ ಕೀಸೆಯೊಳಗೆ ಹಾಕಿಕೊಂಡಿದ್ದರು. ಈ ವೇಳೆ ಮೊಬೈಲ್‌ ಸ್ಫೋಟಗೊಂಡಿದೆ. ಪ್ಯಾಂಟ್‌ ಕೀಸೆಯೊಳಗಿದ್ದ ಕಾರಣ ತೊಡೆಯ ಚರ್ಮ ಬೆಂದು ಹೋಗಿದೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿರುವುದಾಗಿ ತಿಳಿದು ಬಂದಿದೆ.

Leave a Reply

error: Content is protected !!