





ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿಯ ಸೈಂಟ್ ಜಾರ್ಜ್ ಓರ್ಥೋಡೊಕ್ಸ್ ಸಿರಿಯನ್ ಚರ್ಚ್ನಲ್ಲಿ ನೂತನ ಆಡಳಿತ ಸಮಿತಿ ರಚಿಸಲಾಗಿದ್ದು ಅಧ್ಯಕ್ಷರಾಗಿ ಚರ್ಚ್ನ ವಿಕಾರ್ ರೆ. ಫಾ.ವರ್ಗೀಸ್ ತೋಮಸ್ ಆಯ್ಕೆಯಾಗಿದ್ದಾರೆ. ಟ್ರಸ್ಟಿಯಾಗಿ ನಿವೃತ್ತ ದೈಹಿಕಶಿಕ್ಷಕ ಉಲಹನ್ನನ್ ಹಾಗೂ ಕಾರ್ಯದರ್ಶಿಯಾಗಿ ಸುನೀಶ್ ಟಿ.ಪಿ. ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಪಿ.ವಿ. ಜೇಕಬ್, ಟಿ.ಪಿ. ಕುರಿಯನ್, ಮೇಹಿ ಜಾರ್ಜ್, ಜಿ. ತೋಮಸ್, ರೋಯ್ ಟಿ.ಎಂ., ಚಾಕೋ ವಿ.ಎನ್., ಜಾನ್ಸನ್ ಟಿ.ಕೆ., ಜಾನ್ಸನ್ ಸಿ.ಕೆ., ಜೋನ್ ಅಬ್ರಹಾಂ ಅವರನ್ನು ಆಯ್ಕೆ ಮಾಡಲಾಗಿದೆ.
ಲೆಕ್ಕಪರಿಶೋಧಕರಾಗಿ ಪಿ.ಸಿ. ಪೌಲೋಸ್ ಹಾಗೂ ಸಜಿತ್ ಚಾಕೋ ನೇಮಕಗೊಂಡಿದ್ದಾರೆ.




