





ನೆಲ್ಯಾಡಿ: ಇಚಿಲಂಪಾಡಿ ಸೈಂಟ್ ತೋಮಸ್ ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯ ಪ್ರತಿ ವರ್ಷದಂತೆ ಈ ವರ್ಷವೂ ಸಂತ ತೋಮಸರ ಹಾಗೂ ಸಹ ಮಧ್ಯಸ್ಥರಾದ ಸಂತ ಗೀವರ್ಗೀಸ್ ಅವರ ವಾರ್ಷಿಕ ಹಬ್ಬವು ಏ.10, 11 ಮತ್ತು 12ರಂದು ನಡೆಯಲಿದೆ.
ಏ.10ರಂದು ಸಂಜೆ 5.30ಕ್ಕೆ ತಿರುನ್ನಾಳ್ ಕೊಡಿಯೇಟ್ ಕಾರ್ಯಕ್ರಮವನ್ನು ಚರ್ಚ್ನ ಧರ್ಮಗುರುಗಳಾದ ರೆ.ಫಾ.ಆಂಟಣಿ ಪಡಿಪುರಯ್ಕಲ್ ಅವರು ನೆರವೇರಿಸಲಿದ್ದಾರೆ. ಬಳಿಕ ಸಂಜೆ 6.30ಕ್ಕೆ ಸಂಧ್ಯಾ ನಮಸ್ಕಾರಂ ನಡೆಯಲಿದ್ದು, ಕಲ್ಲುಗುಡ್ಡೆ ಸೈಂಟ್ ಜೋರ್ಜ್ ಮಲಂಕರ ಚರ್ಚ್ನ ಧರ್ಮಗುರುಗಳಾದ ರೆ.ಫಾ. ಜೋಸೆಫ್ ಶೈಜು ಅವರು ಪ್ರವಚನ ಪ್ರಘೋಷಣಂ ನಡೆಸಿಕೊಡಲಿದ್ದಾರೆ. ಬಳಿಕ ಸೆಮಿತ್ತೇರಿಯಿಲ್ ಧೂಪ ಪ್ರಾರ್ಥನೆ ನಡೆಯಲಿದೆ.
ಏ.11ರಂದು ಸಂಜೆ 4.30ರಿಂದ ಸಂಧ್ಯಾ ನಮಸ್ಕಾರಂ, 5 ಗಂಟೆಗೆ ಶಿರಾಡಿ ಮತ್ತು ಅಡ್ಡಹೊಳೆ ಚರ್ಚ್ನ ಧರ್ಮಗುರುಗಳಾದ ರೆ.ಫಾ.ಸಾಮುವೇಲ್ ಜೋರ್ಜ್ ಅವರಿಂದ ವಿ.ಕುರ್ಬಾನ ನಡೆಯಲಿದೆ. ಇಚಿಲಂಪಾಡಿ ಸೈಂಟ್ ಜೋರ್ಜ್ ಓರ್ತಡೋಕ್ಸ್ ಚರ್ಚ್ನ ರೆ.ಫಾ.ವರ್ಗೀಸ್ ತೋಮಸ್ ಅವರು ವಚನ ಪ್ರಘೋಷಣಂ ನಡೆಸಿಕೊಡಲಿದ್ದಾರೆ. ಸಂಜೆ 7ರಿಂದ ಭಕ್ತಿಪೂರ್ಣ ಪೆರುನ್ನಾಳ್ ಪ್ರದಕ್ಷಿಣಂ (ರಾಸ), 8.30ಕ್ಕೆ ಸಮಾಪನ ಆಶೀರ್ವಾದಂ, ನೇರ್ಚ, ಸ್ನೇಹವಿರುನ್ನ್ ನಡೆಯಲಿದ್ದು, ಬಳಿಕ ಕಲಾ ಸಂಧ್ಯ ಕಾರ್ಯಕ್ರಮ ನಡೆಯಲಿದೆ.
ಏ.12ರಂದು ಬೆಳಗ್ಗೆ 9ಕ್ಕೆ ಪ್ರಭಾತ ಪ್ರಾರ್ಥನೆ, 9.30ಕ್ಕೆ ಚಾನ್ಸಿಲರ್ ಹಾಗೂ ಪುತ್ತೂರು ಭದ್ರಾಸನದ ನೆಲ್ಯಾಡಿ ಸೈಂಟ್ ಜೋಸೆಫ್ ಎಂ.ಎಸ್.ಸಿ.ಸಿ ಚರ್ಚ್ನ ಧರ್ಮಗುರುಗಳಾದ ರೆ.ಫಾ.ಜೋನ್ ಕುನ್ನತ್ತೇತ್ ಅವರಿಂದ ಆಘೋಷಮಯ ವಿ.ಕುರ್ಬಾನ ನಡೆಯಲಿದೆ. 11ಕ್ಕೆ ಸೈಂಟ್ ಜೋರ್ಜ್ ಓರ್ತಡೋಕ್ಸ್ ಪಳ್ಳಿಗೆ ಪೆರುನ್ನಾಳ್ ಪ್ರದಕ್ಷಿಣಂ (ರಾಸ) ನಡೆಯಲಿದ್ದು, 12ಕ್ಕೆ ಸಮಾಪನ ಆಶೀರ್ವಾದಂ, ನೇರ್ಚ ಹಾಗೂ ಉಚ್ಚ ಭೋಜನ ವ್ಯವಸ್ಥೆ ನಡೆಯಲಿದೆ.
ಈ ಪವಿತ್ರ ಉತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂತರ ಅನುಗ್ರಹವನ್ನು ಪಡೆಯುವಂತೆ ಟ್ರಸ್ಟಿ ತಂಗಚ್ಚನ್ ಚರುವಿಳ, ಕಾರ್ಯದರ್ಶಿ ಜಾನ್ಸನ್ ಚರುವಿಳ ಹಾಗೂ ಚರ್ಚ್ ಧರ್ಮಗುರು ರೆ.ಫಾ.ಆಂಟಣಿ ಪಡಿಪುರಯ್ಕಲ್ ಅವರು ಪ್ರೀತಿಪೂರ್ವಕವಾಗಿ ಆಹ್ವಾನಿಸಿದ್ದಾರೆ.




