ಕಲ್ಚರ್ಪೆ ಬಳಿ ಬಾವಿಗೆ ಬಿದ್ದ ಕಾಡಾನೆ; ಆನೆಯ ರಕ್ಷಣಾ ಕಾರ್ಯಾಚರಣೆ

ಶೇರ್ ಮಾಡಿ

 

ಕಲ್ಚರ್ಪೆ ಬಳಿ ಬಾವಿಗೆ ಬಿದ್ದ ಕಾಡಾನೆ; ಆನೆಯ ರಕ್ಷಣಾ ಕಾರ್ಯಾಚರಣೆ

ಸುಳ್ಯ: ಕಾಡಾನೆಯೊಂದು ಬಾವಿಗೆ ಬಿದ್ದ ಘಟನೆ ಪೆರಾಜೆ ಸಮೀಪ ಕಲ್ಚರ್ಪೆಯಲ್ಲಿ ನಡೆದಿದೆ.‌ ಅರಣ್ಯದಂಚಿನ ತೋಟದಲ್ಲಿರುವ ಪಾಳು ಬಿದ್ದ ಬಾವಿಗೆ ಕಾಡಾನೆ ಕಳೆದ ರಾತ್ರಿ ಬಿದ್ದಿದೆ. ಕಾಡಿನಿಂದ ನಾಡಿಗೆ ಬಂದ ಆನೆಯು ಆಯತಪ್ಪಿ ಬಾವಿಗೆ ಬಿದ್ದಿದೆ. ಬಾವಿಯೂ ಸುಮಾರು 20 ಅಡಿಗಿಂತಲೂ ಹೆಚ್ಚಿದ್ದು ಬಾವಿಗೆ ಅಲ್ಪ ಪ್ರಮಾಣದಲ್ಲಿ ಮಣ್ಣು ತುಂಬಿಸಿ ಬಳಿಕ ಕ್ರೈನ್ ಸಹಾಯದಿಂದ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಮುಂದಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಆನೆಯ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಬಾವಿಯ ಒಂದು ಬದಿಯಿಂದ ಜೆಸಿಬಿ ಬಳಸಿ ಆಳ ಮಾಡಿ ಆನೆಯನ್ನು ಮೇಲಕ್ಕೆ ತರುವ ಪ್ರಯತ್ನ ನಡೆಸಲಾಗುತಿದೆ. ಸುಳ್ಯ ಎಸಿಎಫ್ ಪ್ರಶಾಂತ್ ಕುಮಾರ್ ಪೈ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ.ಮತ್ತಿತರರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

 

Leave a Reply

error: Content is protected !!