ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್‌ಗೆ ನೂತನ ಅಧ್ಯಕ್ಷರಾಗಿ ಉಲ್ಲಾಹನ್.ಪಿ.ಎಂ ಆಯ್ಕೆ

ಶೇರ್ ಮಾಡಿ

 

ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್‌ಗೆ ನೂತನ ಅಧ್ಯಕ್ಷರಾಗಿ ಉಲ್ಲಾಹನ್.ಪಿ.ಎಂ ಆಯ್ಕೆ

ನೆಲ್ಯಾಡಿ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಐಐಸಿಟಿ ಎಜುಕೇಶನ್ ಹಾಲ್‌ನಲ್ಲಿ ನಡೆಯಿತು.

ನಿಕಟ ಪೂರ್ವಾಧ್ಯಕ್ಷ ಶೀನಪ್ಪ.ಎಸ್ ಅವರ ನೇತೃತ್ವದಲ್ಲಿ, ಅಧ್ಯಕ್ಷ ಪ್ರಕಾಶ್ ಕೆ.ವೈ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಉಲ್ಲಾಹನ್.ಪಿ.ಎಂ., ಕಾರ್ಯದರ್ಶಿಯಾಗಿ ನೆಲ್ಯಾಡಿ ಜ್ಞಾನೋದಯ ಬೆಥನಿ ಐಟಿಐ ಕಾಲೇಜಿನ ಉಪಪ್ರಾಚಾರ್ಯ ಜೋನ್ ಪಿ.ಎಸ್, ಕೋಶಾಧಿಕಾರಿಯಾಗಿ ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ, ಆಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಮೋಹನ್ ಕುಮಾರ್.ಡಿ, ಪ್ರಶಾಂತ್ ಸಿ.ಎಚ್, ಜನಾರ್ದನ ಟಿ, ಜೊತೆ ಕಾರ್ಯದರ್ಶಿಯಾಗಿ ಜಾರ್ಜ್ ಕೆ ತೋಮಸ್, ನಿರ್ದೇಶಕರಾಗಿ ರವೀಂದ್ರ ಟಿ, ವಿ.ಆರ್ ಹೆಗಡೆ, ಚಂದ್ರಶೇಖರ ಬಾಣಜಾಲು, ಪುರಂದರ ಗೌಡ.ಡಿ, ಜಯಾನಂದ ಬಂಟ್ರಿಯಾಲ್, ಜಯಂತಿ ಬಿ.ಎಂ, ರವಿಚಂದ್ರ ಹೊಸವಕ್ಲು, ಸೀನಿರೇಟ್ ಅಧ್ಯಕ್ಷೆಯಾಗಿ ಮೇರಿ.ಕೆ, ಯುವ ವಿಭಾಗದ ಸಂಯೋಜಕರಾಗಿ ವರ್ಗೀಸ್ ಎನ್.ಟಿ, ಯುವ ವಿಭಾಗದ ಅಧ್ಯಕ್ಷರಾಗಿ ಲಿಖಿತ.ಎ. ಅವರನ್ನು ಆಯ್ಕೆ ಮಾಡಲಾಯಿತು.

ಸ್ಥಾಪಕ ಅಧ್ಯಕ್ಷ ಅಬ್ರಹಾಂ ವರ್ಗೀಸ್, ಪೂರ್ವಾಧ್ಯಕ್ಷರುಗಳಾದ ಡಾ.ಸದಾನಂದ ಕುಂದರ್, ಆರ್.ವೆಂಕಟರಮಣ, ನಾರಾಯಣ.ಎನ್ ಬಲ್ಯ ಉಪಸ್ಥಿತರಿದ್ದರು.

 

Leave a Reply

error: Content is protected !!