ಮೇ.1ರಂದು ನೆಲ್ಯಾಡಿಯಲ್ಲಿ ಜೇಸಿಐ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

ಶೇರ್ ಮಾಡಿ

 

ಮೇ.1ರಂದು ನೆಲ್ಯಾಡಿಯಲ್ಲಿ ಜೇಸಿಐ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

ನೆಲ್ಯಾಡಿ: ಜೇಸಿಐ ನೆಲ್ಯಾಡಿ ವತಿಯಿಂದ ಮೇ.1ರಂದು ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಮಂಗಳೂರು ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಪ್ರಾದೇಶಿಕ ರಕ್ತಪೂರಣ ಕೇಂದ್ರದ ಆಶ್ರಯದಲ್ಲಿ ಈ ಶಿಬಿರ ನಡೆಯಲಿದೆ.

ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆ ಆವರಣದಲ್ಲಿ ಬೆಳಗ್ಗೆ 9.00ರಿಂದ ಮಧ್ಯಾಹ್ನ 1.00 ರವರೆಗೆ ನಡೆಯುವ ಈ ಶಿಬಿರವನ್ನು ಸಂತ ಜಾರ್ಜ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜೇಸಿ ಅಬ್ರಹಾಂ ವರ್ಗೀಸ್ ಉದ್ಘಾಟಿಸಲಿದ್ದಾರೆ. ಪ್ರಾದೇಶಿಕ ರಕ್ತಪೂರಣ ಕೇಂದ್ರ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಜೆ. ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು.

ಈ ಮಹತ್ವದ ಸಾಮಾಜಿಕ ಕಾರ್ಯಕ್ರಮಕ್ಕೆ ಲಹರಿ ಸಂಗೀತ ಕಲಾ ಕೇಂದ್ರ, ಐಐಸಿಟಿ ನೆಲ್ಯಾಡಿ, ಧರ್ಮಶ್ರೀ ಮಹಿಳಾ ಮತ್ತು ಮಕ್ಕಳ ಭಜನಾ ಮಂಡಳಿ ಕೌಕ್ರಾಡಿ, ಹೊಸಮಜಲು ಅಶ್ವತ್ಥ ಗೆಳೆಯರ ಬಳಗ, ಮಹಾವಿಷ್ಣು ಗೆಳೆಯರ ಬಳಗ ಅಮುಂಜ, ಪಡುಬೆಟ್ಟು ಆಟೋರಿಕ್ಷಾ ಚಾಲಕ ಮಾಲಕರು, ಎನ್‌ಎಸ್‌ಎಸ್ ಘಟಕ ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿ, ಎಸ್‌ಎಸ್‌ವಿ ಗೆಳೆಯರ ಬಳಗ ದೋಂತಿಲ, ಟೀಮ್ ಸಿಂಧೂರ ನೆಲ್ಯಾಡಿ, ರಾಮನಗರ ಫ್ರೆಂಡ್ಸ್, ವರಮಹಾಲಕ್ಷ್ಮಿ ಮಾತೃ ಭಜನಾ ಮಂಡಳಿ ಸೂರ್ಯನಗರ, ಬೆಥನಿ ಐಟಿಐ ನೆಲ್ಯಾಡಿ, ವರ್ತಕರ ಮತ್ತು ಕೈಗಾರಿಕ ಸಂಘ ನೆಲ್ಯಾಡಿ ಹಾಗೂ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಸೇರಿದಂತೆ ಅನೇಕ ಸಂಘಟನೆಗಳು ಸಹಕಾರ ನೀಡುತ್ತಿವೆ.

“ಝೋನ್ 15, ಜೇಸಿಐ ಇಂಡಿಯಾ – ರಕ್ತದಾನಕ್ಕೆ ಕರೆ” ಎಂಬ ಘೋಷಣೆಯಡಿ ನಡೆಯುವ ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಿ ಮಾನವೀಯ ಸೇವೆಗೆ ಕೈಜೋಡಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಜೇಸಿಐ ನೆಲ್ಯಾಡಿ ಅಧ್ಯಕ್ಷೆ ಪ್ರವೀಣಿ ಸುಧಾಕರ್ ಶೆಟ್ಟಿ, ಮಹಿಳಾ ಜೇಸಿ ಅಧ್ಯಕ್ಷೆ ಜೆಸಿ ನವ್ಯ ಪ್ರಸಾದ್, ಕಾರ್ಯದರ್ಶಿ ಜೆಸಿ ಶ್ರೇಯಸ್ ಶೆಟ್ಟಿ, ಜೆಜೆಸಿ ಕಾರ್ತಿಕ್, ಯೋಜನಾ ನಿರ್ದೇಶಕರಾದ ಜೆಸಿ ಪ್ರಶಾಂತ್ ಹಾಗೂ ಜೆಸಿ ಹರೀಶ್ ರೈ ಸೇರಿದಂತೆ ಪೂರ್ವಾಧ್ಯಕ್ಷರು ಮತ್ತು ಸರ್ವಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಜ್ಜಾಗಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಜೆಸಿ ಪ್ರವೀಣಿ ಶೆಟ್ಟಿ (8861357656), ಜೆಸಿ ಹರೀಶ್ ರೈ (9164946609), ಜೆಸಿ ದೇವಿಪ್ರಸಾದ್ (9741372724) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

Leave a Reply

error: Content is protected !!