ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ: ಚೆನ್ನಪ್ಪ ಪೂಜಾರಿ ಮೃತ್ಯು

ಶೇರ್ ಮಾಡಿ

 

ನೂಜಿಬಾಳ್ತಿಲ: ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ: ಚೆನ್ನಪ್ಪ ಪೂಜಾರಿ ಮೃತ್ಯು

ಕಡಬ: ಬಾಡಿಗೆ ರೂಮಿನಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಸಮೀಪದ ನೂಜಿಬಾಳ್ತಿಲದಲ್ಲಿ ಸಂಭವಿಸಿದೆ. ಮೃತರನ್ನು ಚೆನ್ನಪ್ಪ ಪೂಜಾರಿ (60) ಎಂದು ಗುರುತಿಸಲಾಗಿದೆ.

ಕಡಬ ಕೊಣಾಜೆ ನಿವಾಸಿ ರವಿಚಂದ್ರ ಬಿ ಅವರು ನೀಡಿದ ದೂರಿನ ಪ್ರಕಾರ, ಅವರ ತಂದೆ ಚೆನ್ನಪ್ಪ ಪೂಜಾರಿ ಅವರು ಕಡಬ ನೂಜಿಬಾಳ್ತಿಲದಲ್ಲಿ ಬಾಡಿಗೆ ರೂಮಿನಲ್ಲಿ ವಾಸವಿದ್ದು, ಮಧ್ಯಪಾನ ಮಾಡುವ ಅಭ್ಯಾಸ ಹೊಂದಿದ್ದರು. ಮೇ.1ರಂದು ಅವರು ವಾಸವಿದ್ದ ಕಟ್ಟಡದ ಮಾಲಿಕರು ರವಿಚಂದ್ರ ಬಿ ಅವರಿಗೆ ಕರೆ ಮಾಡಿ, ನಿಮ್ಮ ತಂದೆಯವರು ಬಾಡಿಗೆ ರೂಮಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ವೇಳೆ ಘಟನೆ ದೃಢಪಟ್ಟಿದೆ.

ಈ ಕುರಿತು ರವಿಚಂದ್ರ ಬಿ ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ. 17/2026 ಕಲಂ 194 BNSS-2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಘಟನೆಯ ನಿಖರ ಕಾರಣ ತಿಳಿದುಬರಬೇಕಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.

 

Leave a Reply

error: Content is protected !!