ಇಚ್ಲಂಪಾಡಿ ಸೈಂಟ್ ಜಾರ್ಜ್ ಚರ್ಚ್ ವಾರ್ಷಿಕ ಹಬ್ಬ ಸಂಪನ್ನ

ಶೇರ್ ಮಾಡಿ

ಮೆಸ್ಕಾಂ ಇಂಜಿನಿಯರ್ ಸಜಿ ಕುಮಾರ್ ಅವರಿಗೆ ‘ಜಾರ್ಜಿಯನ್ ಅವಾರ್ಡ್‌ 2026’ ಪ್ರದಾನ

 

ಇಚ್ಲಂಪಾಡಿ ಸೈಂಟ್ ಜಾರ್ಜ್ ಚರ್ಚ್ ವಾರ್ಷಿಕ ಹಬ್ಬ ಸಂಪನ್ನ

ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ದೇವಾಲಯದ ಏಳು ದಿನಗಳ ವಾರ್ಷಿಕ ಹಬ್ಬವು ಭಕ್ತಿ, ಶ್ರದ್ಧೆ ಹಾಗೂ ಅದ್ದೂರಿ ವೈಭವದೊಂದಿಗೆ ಗುರುವಾರ ಸಮಾಪ್ತಿಗೊಂಡಿತು. ಮೇ 1ರಿಂದ 7ರವರೆಗೆ ನಡೆದ ಹಬ್ಬದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿದ್ದು, ಸರ್ವಧರ್ಮದ ಭಕ್ತರು ಭಾಗವಹಿಸಿ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.

ಹಬ್ಬದ ಅಂತಿಮ ದಿನವಾದ ಗುರುವಾರ ಬೆಳಗ್ಗೆ 7.30ಕ್ಕೆ ಪ್ರಭಾತ ಪ್ರಾರ್ಥನೆ, 8.30ಕ್ಕೆ ಪವಿತ್ರ ದಿವ್ಯ ಬಲಿಪೂಜೆ ನಡೆಯಿತು. ತಿರುವನಂತಪುರ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅತೀವಂದನೀಯ ಡಾ.ಗಬ್ರಿಯೇಲ್ ಮಾರ್ ಗ್ರಿಗೋರಿಯೋಸ್ ಅವರು ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ ನೆರವೇರಿಸಿ ಹಬ್ಬದ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಸಮಾಜಸೇವೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಕಡಬ ತಾಲೂಕಿನ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿ ಕುಮಾರ್ ಇಚ್ಲಂಪಾಡಿ ಅವರನ್ನು ಚರ್ಚ್ ವತಿಯಿಂದ ಪ್ರತಿಷ್ಠಿತ ‘ಜಾರ್ಜಿಯನ್ ಅವಾರ್ಡ್‌ 2026’ ನೀಡಿ ಗೌರವಿಸಲಾಯಿತು. ಇಲಾಖಾ ಅಧಿಕಾರಿಯಾಗಿದ್ದರೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಬಳಿಕ ಬೆಳಗ್ಗೆ 11ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ 12ಕ್ಕೆ ಏಲಂ, 1.45ಕ್ಕೆ ಹೊಸಂಗಡಿ ಶಿಲುಬೆ ಗೋಪುರದವರೆಗೆ ಭವ್ಯ ಮೆರೆವಣಿಗೆ ನಡೆಯಿತು. ಮಧ್ಯಾಹ್ನ 3ಕ್ಕೆ ಆಶೀರ್ವಾದ ಹಾಗೂ 3.15ಕ್ಕೆ ಪ್ರಸಾದ ವಿತರಣೆ ನಡೆಯಿತು. ಸಂಜೆ 5ಕ್ಕೆ ಹಬ್ಬದ ಧ್ವಜ ಇಳಿಸುವ ಮೂಲಕ ವಾರ್ಷಿಕೋತ್ಸವಕ್ಕೆ ತೆರೆ ಎಳೆಯಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಚರ್ಚ್‌ಗಳ ಧರ್ಮಗುರುಗಳು, ಚರ್ಚ್ ಧರ್ಮಗುರು ರೆ.ಫಾ. ವರ್ಗೀಸ್ ತೋಮಸ್, ಟ್ರಸ್ಟಿ ಉಲಹನ್ನನ್, ಕಾರ್ಯದರ್ಶಿ ಸುನೀಶ್ ಟಿ.ಪಿ., ಸಮಿತಿ ಸದಸ್ಯರಾದ ಪಿ.ವಿ. ಜೇಕಬ್, ಟಿ.ಪಿ. ಕುರಿಯನ್, ಮೇಹಿ ಜಾರ್ಜ್, ಜಿ. ತೋಮಸ್, ರೋಯ್ ಟಿ.ಎಂ., ಚಾಕೋ ವಿ.ಎನ್., ಜಾನ್ಸನ್ ಟಿ.ಕೆ., ಜಾನ್ಸನ್ ಸಿ.ಕೆ., ಜೋನ್ ಅಬ್ರಹಾಂ, ಲೆಕ್ಕಪರಿಶೋಧಕರಾದ ಪಿ.ಸಿ. ಪೌಲೋಸ್, ಸಜಿತ್ ಚಾಕೋ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ಚರ್ಚ್ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

 

Leave a Reply

error: Content is protected !!