





ನೆಲ್ಯಾಡಿ: ಮುಂಬೈನಲ್ಲಿ ಮೇ.1ರಿಂದ 3ರವರೆಗೆ ನಡೆದ 3ನೇ ಯುಜಿಕೆಎಫ್ಐ ರಾಷ್ಟ್ರೀಯ ಒಬ್ಲಿಕ್ ಕರಾಟೆ ಟೂರ್ನಮೆಂಟ್ನಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮೆರೆದಿದ್ದಾರೆ.
ಕಾಲೇಜಿನ 15 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅವರಲ್ಲಿ ಐವರು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.
ಸ್ಪರ್ಧೆಯಲ್ಲಿ ಹಿಶಾಂ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. ಫಾಸಿಲಾ, ಅದ್ವೈತಾ, ಮನ್ವಿತ್ ಹಾಗೂ ಜೈರಾ ಅವರು ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಕ ಅಲ್ಫೋನ್ಸ ಅವರು ತರಬೇತಿಯನ್ನು ನೀಡಿದ್ದಾರೆ ವಿದ್ಯಾರ್ಥಿಗಳ ಈ ಸಾಧನೆಗೆ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಸಂಸ್ಥೆಯ ಸಂಚಾಲಕ ಹಾಗೂ ಪ್ರಿನ್ಸಿಪಾಲ್ ರೆ.ಫಾ.ಡಾ.ವರ್ಗೀಸ್ ಕೈಪನಡ್ಕ, ಕೋಶಾಧಿಕಾರಿ ಫಾ.ಸ್ಯಾಮುವೆಲ್, ವೈಸ್ ಪ್ರಿನ್ಸಿಪಾಲ್ ಜೋಸ್ ಎಂ.ಜೆ., ಪ್ರೌಢಶಾಲಾ ಮುಖ್ಯಶಿಕ್ಷಕ ಜಾರ್ಜ್ ಕೆ.ಥಾಮಸ್ ಮತ್ತು ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಜೋಸ್ ಪ್ರಕಾಶ್ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.



