






ನೆಲ್ಯಾಡಿ:ಸೆಂಟ್ ಅಲ್ಫೋನ್ಸ ಎಸ್‌ಎಂವೈಎಂ ಇದರ ನೇತೃತ್ವದಲ್ಲಿ ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು, ದೇರಳಕಟ್ಟೆ ಮಂಗಳೂರು ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಭಾರತೀಯ ಭೂಸೇನೆಯ ಲೆಫ್ಟಿನೆಂಟ್ ಜನರಲ್ ಜಿನೋಜ್ ಪುತ್ತೆನ್ ಪರಂಭಿಲ್ ಉದ್ಘಾಟಿಸಿದರು. ಗಡಿಯಲ್ಲಿ ದೇಶವನ್ನು ಕಾಪಾಡುವ ಯೋಧರಂತೆ, ರಕ್ತದಾನಿಗಳು ಜೀವವನ್ನು ಉಳಿಸುವ ಸೈನಿಕರು ಎಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು. ವೇದಿಕೆಯಲ್ಲಿ ಸೆಂಟ್ ಅಲ್ಫೋನ್ಸ ಚರ್ಚ್ ನ ಧರ್ಮಗುರು ವಂ.ಫಾ.ಶಾಜಿ ಮಾತ್ಯು, ಎಸ್‌ಎಂವೈಎಂ ಅಧ್ಯಕ್ಷ ಜಿತು, ಉಪಾಧ್ಯಕ್ಷೆ ದಿಶಾ, ಸಿಸ್ಟರ್ ಲಿಸ್ ಮಾತ್ಯು, ಮಾತೃವೇದಿಕೆಯ ಸುಜಾ ಜೇಮ್ಸ್, ಕ್ರೆಡಿಟ್ ಯೂನಿಯನ್‌ನ ಶಿಬು, ವಿನ್ಸೆಂಟ್ ಡಿ ಪೌಲ್ ಸೊಸೈಟಿಯ ಸನ್ನಿ, ಟ್ರಸ್ಟಿಗಳಾದ ಜಾನ್ಸನ್ ಹಾಗೂ ರಾಜೇಶ್, ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನ ಡಾ.ಮಂಜುಷ ಮೊದಲಾದವರು ಉಪಸ್ಥಿತರಿದ್ದರು.


