ಉಪ್ಪಿನಂಗಡಿಯಲ್ಲಿ ಡಾ. ಭಟ್ಸ್ ಹೋಮಿಯೋಪತಿ ಕ್ಲಿನಿಕ್ ಉದ್ಘಾಟನೆ

ಶೇರ್ ಮಾಡಿ

 

ಉಪ್ಪಿನಂಗಡಿಯಲ್ಲಿ ಡಾ. ಭಟ್ಸ್ ಹೋಮಿಯೋಪತಿ ಕ್ಲಿನಿಕ್ ಉದ್ಘಾಟನೆ

ಉಪ್ಪಿನಂಗಡಿ: ಸಾರ್ವಜನಿಕರಿಗೆ ಗುಣಮಟ್ಟದ ಹೋಮಿಯೋಪತಿ ಚಿಕಿತ್ಸೆಯನ್ನು ಒದಗಿಸುವ ಉದ್ದೇಶದಿಂದ “ಡಾ.ಭಟ್ಸ್ ಹೋಮಿಯೋಪತಿ ಕ್ಲಿನಿಕ್” ಉಪ್ಪಿನಂಗಡಿಯ ವೆಂಕಟ್ರಮಣ ಪ್ರಸಾದ್ ಬಿಲ್ಡಿಂಗ್‌ನಲ್ಲಿ ಮೇ 13ರಂದು ಶುಭಾರಂಭಗೊಂಡಿತು.

ಕಾರ್ಯಕ್ರಮವನ್ನು ಉಪ್ಪಿನಂಗಡಿಯ ಖ್ಯಾತ ಆಯುರ್ವೇದ ವೈದ್ಯರಾದ ಡಾ.ಗೋವಿಂದ ಪ್ರಸಾದ್ ಕಜೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿಯ ಹಿರಿಯ ವೈದ್ಯರಾದ ಡಾ.ಕೆ.ಜಿ. ಭಟ್ ಉಪಸ್ಥಿತರಿದ್ದು ನೂತನ ಕ್ಲಿನಿಕ್‌ಗೆ ಶುಭಾಶಯ ಕೋರಿದರು.

ಬಿ.ಸಿ.ರೋಡ್‌ನ ಹೋಮಿಯೋಪತಿ ವೈದ್ಯರಾದ ಡಾ.ಅವಿನಾಶ್ ಹಾಗೂ ಡಾ.ರಮ್ಯಾ ಅವಿನಾಶ್, ಸಂಕೀರ್ಣದ ಮಾಲಕರಾದ ರಾಜೇಶ್ ಪ್ರಭು, ಉಪ್ಪಿನಂಗಡಿಯ ಡಾ.ನಿರಂಜನ್ ರೈ, ಕೈಲಾರ್ ಮೆಡಿಕಲ್ಸ್‌ನ ಸತ್ಯನಾರಾಯಣ ಭಟ್, ಶ್ರೀರಾಮ ಮೆಡಿಕಲ್ಸ್‌ನ ಶಿವ ಭಟ್, ಮಕ್ಕಳ ತಜ್ಞ ಡಾ.ಎಂ.ಎನ್.ಭಟ್, ಡಾ.ಯತೀಶ್, ಡಾ.ಸಂತೋಷ್, ಉದ್ಯಮಿ ಯು. ರಾಮ, ವಿಶ್ವನಾಥ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಕ್ಲಿನಿಕ್‌ನ ವೈದ್ಯರಾದ ಡಾ.ಅನೀಶ್ ಕುಮಾರ್ ಹಾಗೂ ಪತ್ನಿ ಉಷಾ ಅನೀಶ್, ಪುತ್ರ ಅಚಿಂತ್ಯ ಮತ್ತು ಕುಟುಂಬಸ್ಥರು ಆಗಮಿಸಿದ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಸತ್ಕರಿಸಿದರು.

ಈ ಕ್ಲಿನಿಕ್‌ನಲ್ಲಿ ಮಂಗಳವಾರದಿಂದ ಶನಿವಾರದವರೆಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವೈದ್ಯರು ಸಂದರ್ಶನಕ್ಕೆ ಲಭ್ಯರಿರುವುದಾಗಿ ತಿಳಿಸಲಾಗಿದೆ.

 

Leave a Reply

error: Content is protected !!