






ನೆಲ್ಯಾಡಿ: ಬೆಥನಿ ಐಟಿಐ ಸಂಸ್ಥೆಯಲ್ಲಿ “ಕ್ಯಾಂಪಸ್ ಡ್ರೈವ್–2026” ಕಾರ್ಯಕ್ರಮದ ಅಂಗವಾಗಿ ಜಪಾನ್ ಮೂಲದ ಪ್ರತಿಷ್ಠಿತ ಮಕಿನೋ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಸಂಸ್ಥೆಯಿಂದ ಫಿಟ್ಟರ್, ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಿಕಲ್ ವಿಭಾಗಗಳಲ್ಲಿ ತಾಂತ್ರಿಕ ತರಬೇತಿ ಪಡೆದ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಉದ್ಯೋಗ ಆಯ್ಕೆ ಪ್ರಕ್ರಿಯೆ ನಡೆಯಿತು.
ಮಕಿನೋ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ವಿನಯ್ ಹಾಗೂ ತಂಡದವರು ಕಂಪನಿಯ ವೈಶಿಷ್ಟ್ಯತೆ, ಉದ್ಯೋಗ ವ್ಯವಸ್ಥೆ, ತರಬೇತಿ ಸೌಲಭ್ಯಗಳು ಮತ್ತು ಭವಿಷ್ಯದ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸಂಸ್ಥೆಯ ಪ್ರಾಚಾರ್ಯ ಸಜಿ ಕೆ. ತೋಮಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ತಾಂತ್ರಿಕ ಶಿಕ್ಷಣದೊಂದಿಗೆ ಉದ್ಯೋಗಮುಖಿ ಕೌಶಲ್ಯಗಳ ಅಗತ್ಯತೆಯನ್ನು ತಿಳಿಸಿದರು.
ಸುಬ್ರಾಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉಪನ್ಯಾಸಕರಾದ ವಿನ್ಸೆಂಟ್ ಸಿ.ಎಸ್ ಹಾಗೂ ಶಿವಾನಂದ ಎಸ್ ಕಾರ್ಯಕ್ರಮವನ್ನು ಸಂಯೋಜಿಸಿ ಯಶಸ್ವಿಗೊಳಿಸಿದರು.


