ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಿಶ್ವ ದಾದಿಯರ ದಿನಾಚರಣೆ

ಶೇರ್ ಮಾಡಿ

 

ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಿಶ್ವ ದಾದಿಯರ ದಿನಾಚರಣೆ

ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಿಶ್ವ ದಾದಿಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾಜದ ಆರೋಗ್ಯ ಸೇವೆಯಲ್ಲಿ ಮಹತ್ತರ ಪಾತ್ರವಹಿಸುತ್ತಿರುವ ದಾದಿಯರ ಸೇವೆಯನ್ನು ಸ್ಮರಿಸಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರು ವಂ. ಫಾ. ಶಾಜಿ ಮಾತ್ಯು ಮಾತನಾಡಿ, ದಾದಿಯರು ತಮ್ಮ ನಿಸ್ವಾರ್ಥ ಸೇವೆ, ತ್ಯಾಗ ಹಾಗೂ ಮಾನವೀಯ ಕಾಳಜಿಯಿಂದ ಸಮಾಜದ ವಿಶ್ವಾಸವನ್ನು ಗಳಿಸಿರುವರು. ರೋಗಿಗಳ ಆರೈಕೆಯಲ್ಲಿ ಅವರು ವಹಿಸುವ ಪಾತ್ರ ಅಮೂಲ್ಯವಾಗಿದ್ದು, ಆರೋಗ್ಯ ಕ್ಷೇತ್ರದ ನಿಜವಾದ ಸೇವಕರು ದಾದಿಯರೇ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೆಜಿನ ಕಕ್ಕಾಟ್ಟ್, ಸಂತೋಷ್ ಕಕ್ಕಾಟ್ಟ್, ಶೈನಿ ನಿರಪ್ಪೆಲ್, ಅಲಿನ ಪೆರುಂಪಳ್ಳಿ, ಡೀನ ಕಾಂಜಿರತ್ತು ಮೂಟ್ಟಿಲ್, ಸ್ಟೆಫಿ ಚೋಪಿತ್ತಾನಂ, ಅರ್ಚನಾ ಕಚೋಲಮಾಕ್ಕಿಲ್, ಶೆರ್ಲಿ ಎಂಬ್ರಾಂಡಿವಯಲಿಲ್, ಶಿಜಿ ಪಾರಪುರಂ, ಜೋಯಿಸಿ ತೊಂಡಿಯಾತಡಂ, ತ್ರೆಸಿಯಮ್ಮ ಮುನವಳ್ಳಿ, ಚಿಂಜು ಕಡವಿಲ್, ಅನ್ನಮ್ಮ ಚುಂಡಯಿಲ್, ಗ್ರೇಸಿ ಅರಕ್ಕತರ ಹಾಗೂ ಪ್ರಬೀನ ಅಂಬಾಟ್ಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮಾತೃವೇದಿಕೆ ಅಧ್ಯಕ್ಷೆ ಸುಜಾ ಜೇಮ್ಸ್, ಸಿಸ್ಟರ್ ಲಿಸ್ ಮಾತ್ಯು, ಯುವಜನ ಸಂಘದ ದಿಶಾ ಮತ್ತು ಜಿತು, ಕ್ರೆಡಿಟ್ ಯೂನಿಯನ್‌ನ ಶಿಬು, ವಿನ್ಸೆಂಟ್ ಡಿ ಪೌಲ್ ಸಂಘದ ಸಣ್ಣಿ ಉಪಸ್ಥಿತರಿದ್ದರು.

ಲೆಫ್ಟಿನೆಂಟ್ ಜನರಲ್ ಜಿನೋಜ್ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಬೆರಿಲ್ ಕಾರ್ಯಕ್ರಮ ನಿರೂಪಿಸಿದರು.

 

Leave a Reply

error: Content is protected !!