ಮೇ 31; ಕೊಣಾಲು ಶಾಲೆಯ ಸಹಶಿಕ್ಷಕಿ ಭವಾನಿ ಬಿ.ಎಲ್. ಸೇವಾ ನಿವೃತ್ತಿ

ಶೇರ್ ಮಾಡಿ

 

ಮೇ 31ರಂದು ಕೊಣಾಲು ಶಾಲೆಯ ಸಹಶಿಕ್ಷಕಿ ಭವಾನಿ ಬಿ.ಎಲ್. ಸೇವಾ ನಿವೃತ್ತಿ

ನೆಲ್ಯಾಡಿ: ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ನಿಷ್ಠೆ, ಶಿಸ್ತು ಹಾಗೂ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿದ ಕಡಬ ತಾಲೂಕಿನ ಕೊಣಾಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಭವಾನಿ ಬಿ.ಎಲ್. ಅವರು ಮೇ 31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ಭವಾನಿ ಬಿ.ಎಲ್. ಅವರು ತಮ್ಮ ಶಿಕ್ಷಕ ವೃತ್ತಿಯನ್ನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕರಿಕೆ ಕಾಲೋನಿ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿದ್ದರು. ಬಳಿಕ 1997ರ ಜೂನ್ 26ರಂದು ಕಡಬ ತಾಲೂಕಿನ ಕೊಣಾಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಆಗಮಿಸಿದ ಅವರು ಕಳೆದ 29 ವರ್ಷಗಳಿಂದ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ಒಟ್ಟು 32 ವರ್ಷಗಳ ಶಿಕ್ಷಕ ಸೇವೆಯಲ್ಲಿ ಅವರು ವಿದ್ಯಾರ್ಥಿಗಳ ಪ್ರೀತಿ, ಪೋಷಕರ ವಿಶ್ವಾಸ ಹಾಗೂ ಸಹೋದ್ಯೋಗಿಗಳ ಗೌರವವನ್ನು ಸಂಪಾದಿಸಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಸರಳತೆ, ಕರ್ತವ್ಯನಿಷ್ಠೆ ಹಾಗೂ ಮಕ್ಕಳ ಬಗ್ಗೆ ಇರುವ ಕಾಳಜಿಯಿಂದ ಶಾಲಾ ಸಮುದಾಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ.

ಪ್ರಸ್ತುತ ಅವರು ಕಡಬ ತಾಲೂಕಿನ ಕೊಣಾಲು ಗ್ರಾಮದ ಪಾಂಡಿಬೆಟ್ಟು ಸಮೀಪದ ‘ಅನುಗ್ರಹ’ ನಿವಾಸದಲ್ಲಿ ವಾಸವಾಗಿದ್ದಾರೆ. ಇವರ ಪುತ್ರ ಹಾಗೂ ಸೊಸೆ ಬೆಂಗಳೂರಿನ ಐಟಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, ಪುತ್ರಿ ಹಾಗೂ ಅಳಿಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೇ 31ರಂದು ಸೇವಾ ನಿವೃತ್ತಿ ಹೊಂದುತ್ತಿರುವ ಭವಾನಿ ಬಿ.ಎಲ್. ಅವರ ಸುದೀರ್ಘ ಹಾಗೂ ಸಾರ್ಥಕ ಶಿಕ್ಷಣ ಸೇವೆಯನ್ನು ಶಾಲಾ ಆಡಳಿತ ಮಂಡಳಿ, ಸಹೋದ್ಯೋಗಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸ್ಮರಿಸಿದ್ದು, ನಿವೃತ್ತಿ ಜೀವನ ಸುಖಕರ ಹಾಗೂ ಆರೋಗ್ಯಪೂರ್ಣವಾಗಿರಲೆಂದು ಹಾರೈಸಿದ್ದಾರೆ.

 

Leave a Reply

error: Content is protected !!