ಉದನೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಂಭ್ರಮ: ಕಿಂಡರ್ ಗಾರ್ಟನ್ ಪುಟಾಣಿಗಳ ಅಕ್ಷರಾಭ್ಯಾಸಕ್ಕೆ ಚಾಲನೆ

ಶೇರ್ ಮಾಡಿ

“ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು” – ಬಿಷಪ್ ಯಾಕೋಬ್ ಮಾರ್ ಆಂತೋನೀಸ್

 

ಉದನೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಂಭ್ರಮ: ಕಿಂಡರ್ ಗಾರ್ಟನ್ ಪುಟಾಣಿಗಳ ಅಕ್ಷರಾಭ್ಯಾಸಕ್ಕೆ ಚಾಲನೆ

ನೆಲ್ಯಾಡಿ: ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಗಳಾದ ಸೈಂಟ್ ಆಂಟನೀಸ್ ಪ್ರೌಢಶಾಲೆ, ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಹಾಗೂ ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಟನ್‌ನ 2026-27ನೇ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವ ಹಾಗೂ ಪುಟಾಣಿ ಮಕ್ಕಳ ಅಕ್ಷರಾಭ್ಯಾಸ ಸಮಾರಂಭ ಸಂಭ್ರಮದಿಂದ ನಡೆಯಿತು.

ಹೊಸ ಶೈಕ್ಷಣಿಕ ವರ್ಷಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ವಾದ್ಯಘೋಷ, ಪುಷ್ಪಾರ್ಚನೆ ಹಾಗೂ ಹರ್ಷೋದ್ಗಾರದೊಂದಿಗೆ ಶಾಲಾ ಆವರಣದಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಸೈಂಟ್ ಆಂಟನೀಸ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಶ್ರೀಧರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಸ ಶೈಕ್ಷಣಿಕ ವರ್ಷದ ಶುಭಾಶಯಗಳೊಂದಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಸಹ ಸಂಚಾಲಕ ಡೀಕನ್ ಜಾರ್ಜ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ವಿದ್ಯಾಭ್ಯಾಸದ ಮಹತ್ವವನ್ನು ತಿಳಿಸಿದರು.

ಬಳಿಕ ನಡೆದ ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಟನ್ ಪುಟಾಣಿಗಳ ಪ್ರವೇಶೋತ್ಸವ ಹಾಗೂ ಅಕ್ಷರಾಭ್ಯಾಸ ಸಮಾರಂಭವನ್ನು ಸೈಂಟ್ ಆಂಟನೀಸ್ ಎಜುಕೇಶನಲ್ ಸೊಸೈಟಿ, ಹೊನ್ನಾವರ ಇದರ ನಿರ್ದೇಶಕ ಪರಮಪೂಜ್ಯ ಬಿಷಪ್ ಯಾಕೋಬ್ ಮಾರ್ ಆಂತೋನೀಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮನೆಯೇ ಮೊದಲ ಪಾಠಶಾಲೆ ಹಾಗೂ ತಾಯಿಯೇ ಮೊದಲ ಗುರು. ತಾಯಿಯಿಂದಲೇ ಮಗು ಉತ್ತಮ ಸಂಸ್ಕಾರವನ್ನು ಕಲಿಯುತ್ತದೆ. ಬಾಲ್ಯದಲ್ಲಿ ತಾಯಿಯಿಂದ ಪಡೆದ ಸಂಸ್ಕಾರವು ಜೀವನಪರ್ಯಂತ ದಾರಿದೀಪವಾಗಿ, ಭವಿಷ್ಯದ ಭವ್ಯ ಬುನಾದಿಯಾಗುತ್ತದೆ” ಎಂದು ಹೇಳಿದರು. ಅಲ್ಲದೆ, ಜ್ಞಾನದ ಹೊಸ್ತಿಲಿಗೆ ಮೊದಲ ಹೆಜ್ಜೆ ಇಡುತ್ತಿರುವ ಪುಟಾಣಿ ಮಕ್ಕಳ ಕೈ ಹಿಡಿದು ಅಕ್ಷರ ಬರೆಯಿಸಿ ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಸೈಂಟ್ ಆಂಟನೀಸ್ ಎಜುಕೇಶನಲ್ ಸೊಸೈಟಿಯ ಮ್ಯಾನೇಜಿಂಗ್ ಕಮಿಟಿ ಸದಸ್ಯ ಕಮಾಂಡರ್ ಇ.ಪಿ. ಐಸಾಕ್, ಸಂಸ್ಥೆಯ ಸಹ ಸಂಚಾಲಕ ಡೀಕನ್ ಜಾರ್ಜ್ ಹಾಗೂ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನ ಮುಖ್ಯಶಿಕ್ಷಕ ಪ್ರಕಾಶ್ ಉಪಸ್ಥಿತರಿದ್ದರು. ಪಾಲಕರು, ಪುಟಾಣಿ ಮಕ್ಕಳು ಹಾಗೂ ಶಿಕ್ಷಕ ವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಿಂಡರ್ ಗಾರ್ಟನ್ ವಿಭಾಗದ ಮುಖ್ಯಸ್ಥೆ ಸೌಮ್ಯ ಸ್ವಾಗತಿಸಿದರು. ಶಿಕ್ಷಕಿ ರಮ್ಯ ಪಾಲಕರಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಶಿಕ್ಷಕಿ ಅನ್ನಮ್ಮ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಪ್ರಜ್ವಿತಾ ವಂದಿಸಿದರು.

 

Leave a Reply

error: Content is protected !!