ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಮೂರು ದಿನಗಳ ಎನ್‌ಎಲ್‌ಪಿ ವಿಶೇಷ ಕಾರ್ಯಾಗಾರ

ಶೇರ್ ಮಾಡಿ

 

ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಮೂರು ದಿನಗಳ ಎನ್‌ಎಲ್‌ಪಿ ವಿಶೇಷ ಕಾರ್ಯಾಗಾರ

ನೆಲ್ಯಾಡಿ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಭಾವನಾತ್ಮಕ ಅರಿವು ಹಾಗೂ ಶಿಕ್ಷಕರ ಬೋಧನಾ ಕೌಶಲ್ಯ ವೃದ್ಧಿಗೆ ಪೂರಕವಾಗುವ ಉದ್ದೇಶದಿಂದ ನೆಲ್ಯಾಡಿಯ ಜ್ಞಾನೋದಯ ಬೆಥನಿ ಪಿಯು ಕಾಲೇಜಿನಲ್ಲಿ ‘ಆತ್ಮಮಿತ್ರ’ ಸಂಸ್ಥೆಯ ವತಿಯಿಂದ ನ್ಯೂರೋ ಭಾಷಾಶಾಸ್ತ್ರ (ಎನ್‌ಎಲ್‌ಪಿ) ಕಾರ್ಯಾಗಾರವು ಜೂ.1ರಿಂದ 3ರವರೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು, ಕಾಲೇಜಿನ ಅಧ್ಯಾಪಕರು ಹಾಗೂ ಬೆಥನಿ ಐಟಿಐ ಶಿಕ್ಷಕರು ಭಾಗವಹಿಸಿ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ಪಡೆದರು. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿಶೇಷ ಅಧಿವೇಶನದಲ್ಲಿ ಪಾಲಕರ ಪೋಷಣೆಯ ಮಹತ್ವ, ಮಕ್ಕಳ ಭಾವನೆಗಳನ್ನು ಅರ್ಥೈಸಿಕೊಳ್ಳುವ ಅಗತ್ಯತೆ, ಗುರುಹಿರಿಯರಿಗೆ ಗೌರವ ನೀಡುವ ಮೌಲ್ಯ, ವಿದ್ಯಾರ್ಥಿಗಳ ಜವಾಬ್ದಾರಿಗಳು, ಮಹಿಳಾ ಸಬಲೀಕರಣ ಸೇರಿದಂತೆ ಜೀವನ ಮೌಲ್ಯಾಧಾರಿತ ವಿಷಯಗಳ ಕುರಿತು ವಿವರವಾಗಿ ತಿಳಿಸಲಾಯಿತು.

ಶಿಕ್ಷಕರಿಗಾಗಿ ನಡೆದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧನೆ ನಡೆಸುವ ವಿಧಾನಗಳು, ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವ ಅಗತ್ಯತೆ, ಶಿಕ್ಷಕರ ಕುರಿತು ವಿದ್ಯಾರ್ಥಿಗಳಲ್ಲಿ ಮಾತೃಭಾವನೆ ಹಾಗೂ ವಿಶ್ವಾಸ ಬೆಳೆಸುವ ಮಾರ್ಗಗಳು, ಯುವಜನರಲ್ಲಿ ಆತ್ಮಹತ್ಯೆ ಸೇರಿದಂತೆ ಅನಪೇಕ್ಷಿತ ಕೃತ್ಯಗಳು ಸಂಭವಿಸಲು ಕಾರಣವಾಗುವ ಅಂಶಗಳು ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.

ಆತ್ಮಮಿತ್ರ ಸಂಸ್ಥೆಯ ನಿರ್ದೇಶಕರಾದ ರೆ.ಫಾ.ಟೋಬಿ ಜೋಸೆಫ್ ಎಸ್.ಜೆ., ಸಿಸ್ಟರ್ ಡಿನಾ ಅಗಸ್ಟಿನ್ ಹಾಗೂ ಅಲಿನಾ ಅವರು ಕಾರ್ಯಾಗಾರ ನಡೆಸಿಕೊಟ್ಟು ಭಾಗವಹಿಸಿದವರಿಗೆ ಉಪಯುಕ್ತ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಡಾ.ವರ್ಗೀಸ್ ಕೈಪನಡ್ಕ ಒಐಸಿ ಅವರು ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಜೋಸ್ ಎಂ.ಜೆ. ವಂದಿಸಿದರು. ರೆ.ಫಾ.ಸಾಮ್ಯುವೆಲ್ ಜಾರ್ಜ್ ಒಐಸಿ, ರೆ.ಫಾ.ವರ್ಗೀಸ್ ಎಸ್. ಒಐಸಿ ಹಾಗೂ ಬ್ರದರ್ ಅಜಿಲ್ ಒಐಸಿ ಉಪಸ್ಥಿತರಿದ್ದರು.

 

Leave a Reply

error: Content is protected !!