







ನೆಲ್ಯಾಡಿ: ಶಿವಳ್ಳಿ ಸಂಪದ ನೆಲ್ಯಾಡಿ ವಲಯದ ಮಹಾಸಭೆಯು ರವಿಪ್ರಸಾದ್ ಆಚಾರ್ ಪಂಜಿಕಂಡ ಅವರ ಮನೆಯಲ್ಲಿ ವಲಯದ ಅಧ್ಯಕ್ಷ ರಾಜೇಶ್ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ವಲಯದ ಸದಸ್ಯರೆಲ್ಲರೂ ಸಾಮೂಹಿಕವಾಗಿ ಶ್ರೀ ವಿಷ್ಣು ಸಹಸ್ರನಾಮ ಪಠಿಸಿದರು. ಶ್ರೇಯಸ್ ದುರ್ಗಾಶ್ರೀ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿದ್ದು,ಗೀತಾ ಆಚಾರ್ ಪಂಜಿಕಂಡ ಅವರು ನೀತಿ ಸಂಹಿತೆ ವಾಚಿಸಿದರು.
ತಾಲೂಕು ಪ್ರತಿನಿಧಿ ಸತೀಶ್ ಮುಡಂಬಡಿತ್ತಾಯ ದುರ್ಗಾಶ್ರೀ ಅವರು ಕಳೆದ ಸಾಲಿನ ಕಾರ್ಯಕ್ರಮಗಳು, ವಿತ್ತೀಯ ನಿರ್ವಹಣೆ ಹಾಗೂ ಸಭೆ ಕರೆದ ಉದ್ದೇಶವನ್ನು ವಿವರಿಸಿದರು. ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಸಭಾಧ್ಯಕ್ಷರ ನಿರ್ದೇಶನದಂತೆ ನಡೆದ ಚುನಾವಣೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಹರಿಪ್ರಸಾದ್ ಭಟ್, ಕಾರ್ಯದರ್ಶಿಯಾಗಿ ರವೀಂದ್ರ ಮಾಸ್ಟರ್ ಹಾಗೂ ತಾಲೂಕು ಪ್ರತಿನಿಧಿಯಾಗಿ ಸತೀಶ್ ಮುಡಂಬಡಿತ್ತಾಯ ದುರ್ಗಾಶ್ರೀ ಆಯ್ಕೆಯಾದರು.ಉಪಾಧ್ಯಕ್ಷರಾಗಿ ರಾಧಾಕೃಷ್ಣ ಬಿ.ಕೆ., ಡಾ.ಮುರಳಿಧರ ಹಾಗೂ ಸುಕುಮಾರ ಎಡಪಡಿತ್ತಾಯ, ಕೋಶಾಧಿಕಾರಿಯಾಗಿ ಆರ್. ವೆಂಕಟರಮಣ, ಜೊತೆ ಕಾರ್ಯದರ್ಶಿಯಾಗಿ ಧನಲಕ್ಷ್ಮಿ ಬಾಳ್ತಿಲ್ಲಾಯ ಕುಂಡಡ್ಕ ಆಯ್ಕೆಯಾದರು.
ನಿರ್ದೇಶಕರಾಗಿ ರವಿಪ್ರಸಾದ್ ಆಚಾರ್, ಡಾ.ಸುಬ್ರಹ್ಮಣ್ಯ ಶಬರಾಯ, ವಿದ್ವಾನ್ ಶ್ರೀಕಾಂತ ಕುಂಜಹ್ನ್ಣಾಯ ಹಾಗೂ ಪುರೋಹಿತ್ ರಾಧಾಕೃಷ್ಣ ಜೋಗಿತ್ತಾಯ, ಗೌರವಾಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್, ಮಹಿಳಾ ಸಂಪದ ಅಧ್ಯಕ್ಷರಾಗಿ ಶಶಿಕಲಾ ಶಬರಾಯ ಹಾಗೂ ಕಾರ್ಯದರ್ಶಿಯಾಗಿ ಗೀತಾ ಪಂಜಿಕಂಡ, ಯುವ ಸಂಪದ ಅಧ್ಯಕ್ಷರಾಗಿ ಪುರೋಹಿತ್ ಆದಿತ್ಯ ಪಿ.ವಿ. ಆಯ್ಕೆಯಾದರು.
ಪುತ್ತೂರು ತಾಲೂಕು ಶಿವಳ್ಳಿ ಸಂಪದದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಅವರು ನೆಲ್ಯಾಡಿ ವಲಯದಲ್ಲಿ ನಡೆಯುತ್ತಿರುವ ಶಿಸ್ತುಬದ್ಧ ಸಭೆಗಳು, ಮಾದರಿ ಕಾರ್ಯಕ್ರಮಗಳು ಹಾಗೂ ಪಾರದರ್ಶಕ ಆರ್ಥಿಕ ನಿರ್ವಹಣೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಅವರನ್ನು ವಲಯದ ವತಿಯಿಂದ ಸನ್ಮಾನಿಸಲಾಯಿತು.
ರಾಜೇಶ್ ಭಟ್ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಆದಿತ್ಯ ಟಿ.ವಿ. ವಂದಿಸಿದರು. ಸಭೆಯ ಪ್ರಯೋಜಕರಾದ ಪಂಜಿಕಂಡ ಮನೆಯವರು ಆತಿಥ್ಯ ನೀಡಿ ಸಹಕರಿಸಿದರು.



