ಕಡಬ: 18 ವರ್ಷದ ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ

ಶೇರ್ ಮಾಡಿ

 

ಕಡಬ: 18 ವರ್ಷದ ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ 18 ವರ್ಷದ ಯುವತಿ ಅರ್ ಪೈನ್ ಮೆಹತಾಬ್ ಅವರು ಮನೆಯಿಂದ ತೆರಳಿದ ಬಳಿಕ ವಾಪಸ್ ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಈ ಕುರಿತು ನೀಡಲಾದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಸಂಖ್ಯೆ 68/2026ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಾಪತ್ತೆಯಾದ ಅರ್ ಪೈನ್ ಮೆಹತಾಬ್ (18), ಗಂಡ: ಮೊಹಮ್ಮದ್ ಆಶಿಕ್, ನೀರಾರಿ ಮನೆ, ಕಲ್ಲುಗುಡ್ಡೆ, ನೂಜಿಬಾಳ್ತಿಲ ಗ್ರಾಮ, ಕಡಬ ತಾಲೂಕು, ದ.ಕ. ಜಿಲ್ಲೆ ನಿವಾಸಿಯಾಗಿದ್ದಾರೆ. ಇವರು ಸುಮಾರು 162 ಸೆಂ.ಮೀ ಎತ್ತರ ಹೊಂದಿದ್ದು, ಕಪ್ಪು ಬಣ್ಣದ ತಲೆಕೂದಲು, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದಾರೆ. ಮನೆಯಿಂದ ತೆರಳುವ ವೇಳೆ ನೀಲಿ ಬಣ್ಣದ ಸೀರೆ ಹಾಗೂ ನೀಲಿ ಬಣ್ಣದ ರವಿಕೆ ಧರಿಸಿದ್ದು, ಕನ್ನಡ ಮತ್ತು ಉರ್ದು ಭಾಷೆಗಳನ್ನು ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂ.7ರಂದು ಮನೆಯಿಂದ ತೆರಳಿದ ಯುವತಿ ಇದುವರೆಗೆ ಮನೆಗೆ ಅಥವಾ ಸಂಬಂಧಿಕರ ಮನೆಗಳಿಗೆ ತಲುಪಿಲ್ಲ. ಹೀಗಾಗಿ ಸಾರ್ವಜನಿಕರು ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಕಡಬ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಕೋರಲಾಗಿದೆ.

ಮಾಹಿತಿಗಾಗಿ ದೂರವಾಣಿ ಸಂಖ್ಯೆ 08251-260044 ಅಥವಾ ಮೊಬೈಲ್ ಸಂಖ್ಯೆ 9480805364 ಅನ್ನು ಸಂಪರ್ಕಿಸಬಹುದು ಎಂದು ಕಡಬ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.

 

Leave a Reply

error: Content is protected !!