ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರದ ನೂತನ ಟ್ರಸ್ಟಿಗಳ ಪದಗ್ರಹಣ

ಶೇರ್ ಮಾಡಿ

 

ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರದ ನೂತನ ಟ್ರಸ್ಟಿಗಳ ಪದಗ್ರಹಣ

ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಾರ್ಷಿಕ ಮಹಾಸಭೆಯಲ್ಲಿ 2026–2027ನೇ ಸಾಲಿಗೆ ಸರ್ವಾನುಮತದಿಂದ ಆಯ್ಕೆಯಾದ ನೂತನ ಟ್ರಸ್ಟಿಗಳಾದ ಜೈಸನ್ ಮ್ಯಾಲಿಲ್, ಕುರಿಯನ್ ಕಿಯಕ್ಕೆಲ್, ರಾಜೇಶ್ ತೆಕ್ಕನಾಟ್ಟ್ ಹಾಗೂ ಸೇಬಾಸ್ಟಿಯನ್ ವಲಿಯಪರಂಭಿಲ್ ಅವರು ಅಧಿಕೃತವಾಗಿ ಪದಗ್ರಹಣ ನೆರವೇರಿಸಿದರು.

ಪುಣ್ಯ ಕ್ಷೇತ್ರದ ಧರ್ಮಗುರು ವಂ.ಫಾ.ಶಾಜಿ ಮಾತ್ಯು ಅವರು ನೂತನ ಟ್ರಸ್ಟಿಗಳಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಿ, ಜವಾಬ್ದಾರಿಯುತ ಸೇವೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಟ್ರಸ್ಟಿಗಳು ನಿಷ್ಕಾಮ ಸೇವಾ ಮನೋಭಾವದಿಂದ ಸಮಾಜಮುಖಿ ಹಾಗೂ ಜನಪರ ಕಾರ್ಯಗಳನ್ನು ಕೈಗೊಂಡು, ಪುಣ್ಯ ಕ್ಷೇತ್ರದ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳು ಹಾಗೂ ಧರ್ಮ ಕೇಂದ್ರದ ಸದಸ್ಯರು ನೂತನ ಟ್ರಸ್ಟಿಗಳಿಗೆ ಅಭಿನಂದನೆ ಸಲ್ಲಿಸಿ, ಅವರ ಅವಧಿಯಲ್ಲಿ ಪುಣ್ಯ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದು ಶುಭ ಹಾರೈಸಿದರು.

 

Leave a Reply

error: Content is protected !!