ಕೊಕ್ಕಡ: ಕಪಿಲಾ ಜೂನಿಯರ್ ಜೆಸಿ ವಿಭಾಗಕ್ಕೆ ಯುವ ಪುರಸ್ಕಾರ ಪ್ರಶಸ್ತಿ

ಶೇರ್ ಮಾಡಿ

 

ಕೊಕ್ಕಡ: ಕಪಿಲಾ ಜೂನಿಯರ್ ಜೆಸಿ ವಿಭಾಗಕ್ಕೆ ಯುವ ಪುರಸ್ಕಾರ ಪ್ರಶಸ್ತಿ

ಕೊಕ್ಕಡ: ಜೆಸಿಐ ಬೈಂದೂರು ಸಿಟಿ ಆತಿಥ್ಯದಲ್ಲಿ ನಡೆದ ಲೇಡಿ ಜೆಸಿ ಹಾಗೂ ಜೂನಿಯರ್ ಜೆಸಿ ಸಮ್ಮೇಳನ ‘ಸಿಂಧು’ ಕಾರ್ಯಕ್ರಮದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕದ ಜೂನಿಯರ್ ಜೆಸಿ ವಿಭಾಗಕ್ಕೆ ಪ್ರತಿಷ್ಠಿತ ‘ಯುವ ಪುರಸ್ಕಾರ’ ಪ್ರಶಸ್ತಿ ಲಭಿಸಿದೆ.

ಜೆಸಿಐ ಕೊಕ್ಕಡ ಕಪಿಲಾ ಘಟಕದ ಜೂನಿಯರ್ ಜೆಸಿ ವಿಭಾಗವು ಸಮಾಜಮುಖಿ ಚಟುವಟಿಕೆಗಳು, ನಾಯಕತ್ವ ಬೆಳೆಸುವ ಕಾರ್ಯಕ್ರಮಗಳು ಹಾಗೂ ಯುವಜನರಲ್ಲಿ ಸೇವಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯಗಳಿಗಾಗಿ ಬೈಂದೂರಿನಲ್ಲಿ ನಡೆದ ಜೆಸಿಐ ವಲಯ–15ರ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿ ಘಟಕದ ಸಾಧನೆಯನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕದ ನಿಕಟಪೂರ್ವ ಅಧ್ಯಕ್ಷೆ ಡಾ. ಶೋಭಾ ಪಿ., ಪೂರ್ವಾಧ್ಯಕ್ಷರಾದ ಕೆ.ಶ್ರೀಧರ ರಾವ್ ಹಾಗೂ ಸಂತೋಷ್ ಜೈನ್, ಕಾರ್ಯದರ್ಶಿ ಜೋಯಲ್ ಪಿರೇರಾ, ವಲಯ ಉಪಾಧ್ಯಕ್ಷ ಜಿತೇಶ್ ಎಲ್. ಪಿರೇರಾ, ಕಪಿಲಾವಾಣಿ ಸಂಪಾದಕರಾದ ಜಸ್ವಂತ್ ಪಿರೇರಾ ಹಾಗೂ ದಕ್ಷಾ ಜೈನ್ ಸೇರಿದಂತೆ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

 

Leave a Reply

error: Content is protected !!