ಶಿಶಿಲ: ರಸ್ತೆ-ವಿದ್ಯುತ್ ತಂತಿ ಮೇಲೆ ಬಿದ್ದ ಮರ; ಶೌರ್ಯ ವಿಪತ್ತು ನಿರ್ವಹಣಾ ಘಟಕದ ತ್ವರಿತ ಕಾರ್ಯಾಚರಣೆ

ಶೇರ್ ಮಾಡಿ

 

ಶಿಶಿಲ: ರಸ್ತೆ-ವಿದ್ಯುತ್ ತಂತಿ ಮೇಲೆ ಬಿದ್ದ ಮರ; ಶೌರ್ಯ ವಿಪತ್ತು ನಿರ್ವಹಣಾ ಘಟಕದ ತ್ವರಿತ ಕಾರ್ಯಾಚರಣೆ

ಕೊಕ್ಕಡ: ಭಾರೀ ಗಾಳಿ-ಮಳೆಯಿಂದ ಶಿಶಿಲ ಅರಸಿನಮಕ್ಕಿ ಭಾಗದಲ್ಲಿ ರಸ್ತೆ ಹಾಗೂ ವಿದ್ಯುತ್ ತಂತಿ ಮೇಲೆ ಮರ ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಮರ ಬಿದ್ದ ಪರಿಣಾಮ ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದರು.

ಮಾಹಿತಿ ತಿಳಿಯುತ್ತಿದ್ದಂತೆಯೇ ಶೌರ್ಯ ವಿಪತ್ತು ನಿರ್ವಹಣಾ ಘಟಕ ಶಿಶಿಲ ಅರಸಿನಮಕ್ಕಿ ಸದಸ್ಯರು ಸ್ಥಳಕ್ಕೆ ಧಾವಿಸಿ, ಮರವನ್ನು ಸುರಕ್ಷಿತವಾಗಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಜೊತೆಗೆ ವಿದ್ಯುತ್ ತಂತಿಗಳಿಗೆ ಯಾವುದೇ ಹೆಚ್ಚಿನ ಹಾನಿಯಾಗದಂತೆ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಲಾಯಿತು.

ಕಾರ್ಯಾಚರಣೆಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕಿರಣ್, ಅವಿನಾಶ್ ಭಿಡೆ ಹಾಗೂ ಕೃಷ್ಣಪ್ಪ ಗೌಡ ಸ್ಥಳೀಯರಾದ ಸುರೇಶ್, ಹರೀಶ, ನಾರಾಯಣ, ಬಾಲಕೃಷ್ಣ, ಕರುಣಾಕರ ಮತ್ತು ಕುಸುಮಾದರ, ಸುಂದರ ಕೆ. ಅವರು ಭಾಗವಹಿಸಿದ್ದರು.

 

Leave a Reply

error: Content is protected !!