










ಕೊಕ್ಕಡ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪಟ್ಲಡ್ಕದಲ್ಲಿರುವ ಶ್ರೀ ಗಡಿಯಾಡಿ ಆದಿಮೊಗರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನದ 2026ರಿಂದ 2029ರವರೆಗಿನ ಮೂರು ವರ್ಷದ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದೆ.
ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ತುಕ್ರಪ್ಪ ಶೆಟ್ಟಿ ನೂಜೆ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಹರೀಶ್ ಪಿ ಹಾಗೂ ಪ್ರಕಾಶ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ದೀಕ್ಷಾ ಸಾಲ್ಯಾನ್, ಜತೆ ಕಾರ್ಯದರ್ಶಿಯಾಗಿ ಪ್ರಕಾಶ್ ರಾವ್, ಕೋಶಾಧಿಕಾರಿಯಾಗಿ ಸತೀಶ್ ಪಿ ಆಯ್ಕೆಯಾಗಿದ್ದಾರೆ. ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ವಿಶ್ವನಾಥ ಪಟ್ಲಡ್ಕ ಮುಂದುವರಿಯಲಿದ್ದಾರೆ.
ಆಡಳಿತ ಮಂಡಳಿಯ ಸದಸ್ಯರಾಗಿ ನವೀನ್ ಪೂಜಾರಿ ಪಟ್ಲಡ್ಕ, ಕರುಣಾಕರ ಪೂಜಾರಿ ಪಟ್ಲಡ್ಕ, ಗಣೇಶ ಕಾಶಿ ಕೊಕ್ಕಡ, ಗಣೇಶ ಪೂಜಾರಿ ಪೋಸೊಲಿಗೆ, ನೆಲ್ಯಾಡಿ ಹಾಗೂ ವಿಶಾಲಾಕ್ಷಿ ಕೊಕ್ಕಡ ಅವರನ್ನು ಆಯ್ಕೆ ಮಾಡಲಾಗಿದೆ.



