










ಸುಬ್ರಹ್ಮಣ್ಯ: ಒಕ್ಕಲಿಗ ಗೌಡ ಸೇವಾ ಸಂಘ (ರಿ), ಕಡಬ ತಾಲೂಕು ಇದರ ಸುಬ್ರಹ್ಮಣ್ಯ ವಲಯದ ವತಿಯಿಂದ ಏನೆಕಲ್ಲು ಗ್ರಾಮದಲ್ಲಿ ರವಿವಾರ “ಒಕ್ಕಲಿಗ ಗೌಡರ ಮಹಾ ಅಭಿಯಾನ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಗ್ರಾಮದ ಪ್ರತಿಯೊಂದು ಮನೆಗೂ ಭೇಟಿ ನೀಡಿ ಸಂಘದ ಚಟುವಟಿಕೆಗಳು, ಸಮಾಜದ ಅಭಿವೃದ್ಧಿ ಯೋಜನೆಗಳು ಹಾಗೂ ಕಡಬ ತಾಲೂಕಿನ ಹೊಸಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಸಮುದಾಯ ಭವನದ ಕುರಿತು ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಅಭಿಯಾನದ ಅಂಗವಾಗಿ ಏನೆಕಲ್ಲು ಗ್ರಾಮವನ್ನು ಮುತ್ಲಾಜೆ ಬೈಲು, ಕಲ್ಕುದಿ ಬೈಲು, ಕರ್ನಾಜೆ ಕಿಬ್ಬೊಡಿಬೈಲು, ಮಲ್ಲಾರ ಮಾದನಮನೆ ಬೈಲು, ಕೋಟಿ ಗೌಡನ ಮನೆ ಅಂಬೆಕಲ್ಲು ಬೈಲು, ಕುರ್ಕಿಲ್ ಅಮೈಬೈಲು, ಸಂಕಡ್ಕ ಉರ್ದೋಳಿ ಬೈಲು, ಪರಮಲೆ ಪುಂಡಿಗದ್ದೆ ಬೈಲು ಹಾಗೂ ತುಂಬತಾಜ ಬೈಲು ಸೇರಿದಂತೆ ಒಟ್ಟು 22 ಗುಂಪುಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಗುಂಪಿನಲ್ಲಿ ನಾಲ್ಕರಿಂದ ಐದು ಮಂದಿ ಸ್ವಯಂಸೇವಕರನ್ನು ನಿಯೋಜಿಸಿ ಮನೆಮನೆಗೆ ಭೇಟಿ ನೀಡುವ ಕಾರ್ಯವನ್ನು ಕೈಗೊಳ್ಳಲಾಯಿತು. ಮನೆಗಳಿಗೆ ಭೇಟಿ ನೀಡಿದ ಸ್ವಯಂಸೇವಕರು ಕಡಬ ತಾಲೂಕಿನ ಹೊಸಮಠದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಸಮುದಾಯ ಭವನದ ಉದ್ದೇಶ, ಅದರ ಉಪಯೋಗಗಳು ಹಾಗೂ ಸಮಾಜದ ಸಹಭಾಗಿತ್ವದ ಅಗತ್ಯತೆಯನ್ನು ವಿವರಿಸಿದರು. ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯವಿರುವ ಆರ್ಥಿಕ ಕ್ರೋಡೀಕರಣದ ಕುರಿತು ಮಾಹಿತಿ ನೀಡಿ ಸಮಾಜದ ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಕಾರ ನೀಡುವಂತೆ ಮನವಿ ಮಾಡಿದರು. ಜೊತೆಗೆ ಸಂಘದ ವಿವಿಧ ಸಾಮಾಜಿಕ ಚಟುವಟಿಕೆಗಳು ಹಾಗೂ ಸಂಘಟನೆಯ ಬಲವರ್ಧನೆಗೆ ಸದಸ್ಯರ ಸಹಕಾರದ ಮಹತ್ವವನ್ನು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಉಪಾಧ್ಯಕ್ಷ ತಮ್ಮಯ್ಯ ಗೌಡ, ಹಿರಿಯರಾದ ತಿಮ್ಮಪ್ಪ ಗೌಡ ಕುಂಡಡ್ಕ, ಆಶಾ ತಿಮ್ಮಪ್ಪ ಗೌಡ, ಸೂರಪ್ಪ ಗೌಡ ಬಲಾಡಿ, ರಾಮಯ್ಯ ಗೌಡ ಮಾದನಮನೆ, ತಾಲೂಕು ಸಂಘಟನಾ ಕಾರ್ಯದರ್ಶಿ ಶಿವರಾಮ ಏನೆಕಲ್ಲು, ಏನೆಕಲ್ಲು ಗ್ರಾಮ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಮಾದನಮನೆ, ಕಾರ್ಯದರ್ಶಿ ಪ್ರಶಾಂತ್ ಕೋಡಿಬೈಲು, ಸುಬ್ರಹ್ಮಣ್ಯ ವಲಯದ ಅಧ್ಯಕ್ಷ ಉಮೇಶ್ ಹೊಸಳ್ಳಿಕೆ, ಉಪಾಧ್ಯಕ್ಷ ಬಾಲಕೃಷ್ಣ ಕಣಕಲ್, ಐನಿಕ್ಕಿ ಗ್ರಾಮ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಟ್ಟೆಮನೆ, ಕಾರ್ಯದರ್ಶಿ ಭವಾನಿಶಂಕರ ಪೈಲಾಜೆ, ಸುಬ್ರಹ್ಮಣ್ಯ ಗ್ರಾಮ ಸಮಿತಿ ಕಾರ್ಯದರ್ಶಿ ವಿಶ್ವನಾಥ ನಡುತೋಟ, ಬಳ್ಪ ಗ್ರಾಮ ಸಮಿತಿ ಅಧ್ಯಕ್ಷ ಹರೀಶ ಕಲಂಗುಡಿ, ಸೂರಪ್ಪ ಗೌಡ ಬಲಾಡಿ, ರಾಮಯ್ಯ ಗೌಡ ಮಾದನಮನೆ ಸೇರಿದಂತೆ ಕಡಬ ತಾಲೂಕಿನ 42 ಗ್ರಾಮಗಳ ಪ್ರಮುಖರು ಹಾಗೂ ನೂರಾರು ಸ್ವಯಂಸೇವಕರು ಭಾಗವಹಿಸಿದ್ದರು.



